ಪೋಷಕರು ಕಾಲೇಜಿಗೆ ಹೋಗು ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ…!

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೆಗಾಲ,ಮಾ.18-ಕೊರೊನಾ ಲಾಕ್‍ಡೌನ್‍ನಿಂದ ಕಾಲೇಜಿಗೆ ಹೋಗದೆ ಕೂಲಿ ಕೆಲಸ ಮಾಡಿಕೊಂಡಿದ್ದ ಯುವತಿಗೆ ಕಾಲೇಜು ಪ್ರಾರಂಭವಾದ ಬಳಿಕ ಪೋಷಕರು ಕಾಲೇಜಿಗೆ ಹೋಗು ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೇಗಲದೊಡ್ಡಿ ಗ್ರಾಮದ ದಿವ್ಯಾ ಮೃತ ಯುವತಿ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ನೀಡಿದ್ದು, ಈ ಸಮಯದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಈಗ ಕಾಲೇಜು ಪ್ರಾರಂಭವಾಗಿದೆ ಓದಲು ಹೋಗು ಎಂದು ಪೋಷಕರು ಕಾಲೇಜಿಗೆ ಕಳುಹಿಸಿದ್ದಾರೆ.

ಓದಲು ಇಷ್ಟವಿಲ್ಲದ ಕಾರಣ ದಿವ್ಯ ಕ್ರಿಮಿನಾಶಕ ಸೇವಿಸಿದ್ದಾಳೆ. ಮಗಳು ನರಳುತ್ತಿರುವುದನ್ನು ಕಂಡ ಪೋಷಕರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin