ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arestedಮೈಸೂರು,ಡಿ.24-ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಎಚ್‍ಡಿಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಹುಣಸೂರು ತಾಲ್ಲೂಕು ಹಲಗೂಡು ಸಮೀಪದ ಕೊಳವಿಗೇ ಗ್ರಾಮದ ನಿವಾಸಿ ದಿನೇಶ್(26) ಬಂಧಿತ ಆರೋಪಿ.

ಬಾಲಕಿಯು ತನ್ನ ಸ್ನೇಹಿತೆ ಮನೆಗೆ ತೆರಳಿದ್ದ ವೇಳೆ ಪರಿಚಯವಾದ ದಿನೇಶ್ ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಆಕೆಯ ಜೊತೆ ಸಲುಗೆ ಹೊಂದಿದ್ದು, ನಂತರ ಅತ್ಯಾಚರವೆಸಗಿದ್ದಾನೆ. ಎಚ್.ಡಿ.ಕೋಟೆ ಹ್ಯಾಂಡ್‍ಫೋಸ್ಟ್ ಬಳಿ ಸಂತ್ರಸ್ತೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಅಳುತ್ತಾ ನಿಂತಿದ್ದ ಬಾಲಕಿಯನ್ನು ಪೊಲೀಸರು ವಿಚಾರಿಸಿದಾಗ ಘಟನೆ ಬಗ್ಗೆ ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಎಚ್‍ಡಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

7 thoughts on “ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಸೆರೆ

Comments are closed.