IMF ಮುಖ್ಯಸ್ಥ ಸ್ಥಾನ ತೊರೆಯಲಿದ್ದಾರೆ ಗೀತಾ ಗೋಪಿನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಅ.20-ಅಂತಾರಾಷ್ಟ್ರೀಯ ಹಣಕಾಸು ನಿ (ಐಎಂಎಫ್) ಯ ಮುಖ್ಯಸ್ಥರಾಗಿರುವ ಗೀತಾ ಗೋಪಿನಾಥ್ ಅವರು ಬರುವ ಜನವರಿಯಲ್ಲಿ ತಮ್ಮ ಉದ್ಯೋಗ ತೊರೆದು ಪ್ರತಿಷ್ಠಿತ ಹಾರ್ವರ್ಡ್ ವಿಶ್ವ ವಿದ್ಯಾಲಯಕ್ಕೆ ವಾಪಾಸಾಗಲಿದ್ದಾರೆ.

ಕಳೆದ 2019 ರಲ್ಲಿ ಭಾರತೀಯ ಮೂಲದ 49 ವರ್ಷದ ಗೀತಾ ಗೋಪಿನಾಥ್ ಅವರು ಐಎಂಎಫ್‍ನ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು.
ಇದುವರೆಗೂ ಐಎಂಎಫ್‍ನ ಮುಖ್ಯಸ್ಥರಾಗಿ ಉತ್ತಮ ನಿರ್ವಹಣೆ ತೋರಿರುವ ಗೀತಾ ಅವರು ಬರುವ ಜನವರಿಯಲ್ಲಿ ಉದ್ಯೋಗ ತೊರೆದು ಮತ್ತೆ ಆರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಮುಂದುವರೆಯಲು ತೀರ್ಮಾನಿಸಿದ್ದಾರೆ ಎಂದು ಗ್ಲೋಬಲ್ ಫೈನಾನ್ಷಿಯಲ್ ಸಂಸ್ಥೆ ತಿಳಿಸಿದೆ.

ಮೈಸೂರು ಮೂಲದ ಗೀತಾ ಅವರು ಐಎಂಎಫ್‍ನ ಮುಖ್ಯಸ್ಥರಾಗಿ ನಿಯೋಜನೆಗೊಂಡ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅವರ ಅವಯಲ್ಲಿ ಐಎಂಎಫ್ ಉತ್ತಮ ಕಾರ್ಯ ನಿರ್ವಹಿಸಿದೆ. ಅವರ ಉತ್ತಾರಧಿಕಾರಿಗೆ ನಾವು ಈಗಾಗಲೆ ಹುಡುಕಾಟ ಆರಂಭಿಸಿದ್ದೇವೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ತಿಳಿಸಿದ್ದಾರೆ.

Facebook Comments