“14 ಕೋಟಿಗೆ ಬಿಕರಿಯಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಏ.8- ಐಪಿಎಲ್‍ನಲ್ಲಿ ಸ್ಫೋಟಕ ಆಟಗಾರರು ಅದರಲ್ಲೂ ಮಧ್ಯಮ ಕ್ರಮಾಂಕದ ಆಟಗಾರರಿಗೆ ಬಲು ಬೇಡಿಕೆ ಇದೇ ಆದ್ದರಿಂದ ನಾನು 14.25 ಕೋಟಿಗೆ ಆರ್‍ಸಿಬಿ ತಂಡಕ್ಕೆ ಬಿಕರಿಯಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಆರ್‍ಸಿಬಿಯ ಸ್ಪೋಟಕ ಆಟಗಾರ ಗ್ಲೆನ್‍ಮ್ಯಾಕ್ಸ್‍ವೆಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಬಾರಿ ನಾನು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದರೂ ಉತ್ತಮ ರನ್ ಗಳಿಸಲು ಸಾಧ್ಯವಾಗಿಲ್ಲದಿದ್ದರೂ ಈ ಬಾರಿಯೂ ನಾನು ದೊಡ್ಡ ಮಟ್ಟಕ್ಕೆ ಬಿಕರಿಯಾಗುವ ಭರವಸೆ ಹರಾಜಿನ ಮುಂಚಿನಿಂದಲೂ ನನ್ನಲ್ಲಿತ್ತು ಅದರಂತೆ ದೊಡ್ಡ ಮೊತ್ತಕ್ಕೆ ಆರ್‍ಸಿಬಿ ತಂಡಕ್ಕೆ ಬಿಕರಿಯಾಗಿದ್ದೇನೆ ಎಂದು ಹೇಳಿದರು.

ನಾನು ಐಪಿಎಲ್‍ನಲ್ಲಿ ಇದುವರೆಗೂ ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರೂ ಕೂಡ ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿವಿಲಿಯರ್ಸ್‍ರೊಂದಿಗೆ ಕೊಠಡಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಮ್ಯಾಕ್ಸಿ ಇದೇ ವೇಳೆ ಹೇಳಿದ್ದಾರೆ.

2020ರ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾದ ಅಲೌಂಡರ್ ಆಟಗಾರ ಗ್ಲೆನ್‍ಮ್ಯಾಕ್ಸ್‍ವೆಲ್ ಅವರು ಆಡಿದ 13 ಪಂದ್ಯಗಳಿಂದ ಕೇವಲ 108 ರನ್‍ಗಳನ್ನು ಗಳಿಸಲಷ್ಟೇ ಶಕ್ತವಾಗಿದ್ದರೂ ಕೂಡ ಮುಂಬರುವ ಐಪಿಎಲ್‍ನಲ್ಲಿ ಆರ್‍ಸಿಬಿಗೆ ಕಪ್À ಗೆಲ್ಲಿಸಿಕೊಡುವಂತಹ ಇನ್ನಿಂಗ್ಸ್ ಆಡುತ್ತೇನೆ ಎಂದು ಮ್ಯಾಕ್ಸಿ ಹೇಳಿದ್ದಾರೆ.

Facebook Comments