ಭಾರತದಲ್ಲಿ ಶೇ.30.3ರಷ್ಟು ಜನರಿಗೆ ಸಿಗುತಿಲ್ಲ ಆಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.16- ಹಸಿವಿನಿಂದ ಕೆಂಗೆಟ್ಟಿರುವ ದೇಶಗಳ ಸರ್ವೆ ನಡೆಸಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ತನ್ನ ವರದಿಯನ್ನು ಪ್ರಕಟಿಸಿದ್ದು, ಭಾರತ ಹಸಿವಿನಲ್ಲಿ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಬಿಡುಗಡೆಯಾಗಿದ್ದು, ಇದರ ಪ್ರಕಾರ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಕೀನ್ಯಾ, ಸೌತ್ ಆಫ್ರಿಕಾ, ಜೋರ್ಡಾನ್‍ಗಳಿಗಿಂತಲೂ ಭಾರತದಲ್ಲಿನ ಹಸಿವಿನ ಪ್ರಮಾಣ ಹೆಚ್ಚಿರುವುದು ಅಂತಾರಾಷ್ಟ್ರೀಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್‍ನಲ್ಲಿ ಅತಿ ಹೆಚ್ಚು ಹಸಿವಿದ್ದು, ಶೇ.53.6ರಷ್ಟು ಜನ ಹಸಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಶೇ.30.3ರಷ್ಟು ಜನ ಹಸಿವಿನಿಂದ ಬಳಲುತ್ತಿದ್ದು, ಕಳೆದ 19 ವರ್ಷಗಳಲ್ಲಿ ಶೇ.8.5ರಷ್ಟು ಮಾತ್ರ ಕಡಿಮೆ ಮಾಡಲು ಸಾದ್ಯವಾಗಿದೆ.

2010ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಹಸಿವಿನ ಪ್ರಮಾಣ ಶೇ.38.8 , 2005ರಲ್ಲಿ ಅದು ಹೆಚ್ಚಾಗಿ ಶೇ.38.9ರಷ್ಟಾಗಿತ್ತು. ಆ ಸಂದರ್ಭದಲ್ಲಿ ತೆಗೆದುಕೊಂಡ ಗಂಭೀರ ಕ್ರಮಗಳಿಂದಾಗಿ ಹಸಿವಿನ ಪ್ರಮಾಣ ತಗ್ಗುತ್ತಾ ಬಂದಿದ್ದು, 2010ರ ವೇಳೆಗೆ ಶೇ.32ರಷ್ಟಾಗಿತ್ತು. ಆದರೆ ಹಸಿವನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗದೇ ಇರುವುದರಿಂದ ಪ್ರಸ್ತುತ ಶೇ.30.3ರಷ್ಟು ಜನ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಿದ್ದು, ಅಲ್ಲಿ ಶೇ.10ಕ್ಕಿಂತ ಕಡಿಮೆ ಹಸಿವಿನ ಪ್ರಮಾಣ ಇರುವುದು ಕಂಡುಬಂದಿದೆ. ಜನಸಂಖ್ಯೆ ಹೆಚ್ಚಿರುವ ಚೀನಾ ಕೂಡ ಹಸಿವಿನಿಂದ ಬಳಲುತ್ತಿದೆ. ಅದರ ಪ್ರಮಾಣ ಶೇ.6.5ರಷ್ಟು ಮಾತ್ರ. ಭಾರತಕ್ಕಿಂತಲೂ ಉಗಾಂಡ ಶೇ.30.6, ಸೂಡಾನ್ ಶೇ.32.8 , ಆಫ್ಘಾನಿಸ್ತಾನ ಶೇ.33.8, ಜಿಂಬಾವೆ ಶೇ.34.4, ಲಿಬೇರಿಯಾ ಶೇ.34.9, ಯೆಮೆನ್ ಶೇ.45.9, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಶೇ.8.6ರಷ್ಟು ಹಸಿವಿನಿಂದ ಬಳಲುತ್ತಿವೆ ಎಂದು ಉಲ್ಲೇಖಿಸಲಾಗಿದೆ.

Facebook Comments