ಇಂಡೋ-ಚೀನಾ ಗಡಿ ಬಿಕ್ಕಟ್ಟು : ಭಾರತಕ್ಕೆ ವಿವಿಧ ದೇಶಗಳ ವ್ಯಾಪಕ ಬೆಂಬಲ, ಚೀನಾಗೆ ನಡುಕ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.4- ಇಂಡೋ-ಚೀನಾ ಗಡಿಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ನಂತರ ತಲೆದೋರಿರುವ ಯುದ್ಧಭೀತಿ ನಡುವೆ ಭಾರತಕ್ಕೆ ಬೆಂಬಲ ನೀಡುತ್ತಿರುವ ದೇಶಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬೆಳವಣಿಗೆಯಿಂದ ಚೀನಾಗೆ ನಡುಕ ಉಂಟಾಗಿದೆ.

ಪದೇ ಪದೇ ಗಡಿಭಾಗದಲ್ಲಿ ಉಪಟಳ ನೀಡುತ್ತಿರುವ ಚೀನಾ ವಿರುದ್ಧ ಈಗಾಗಲೇ ಅಮೆರಿಕ ಸೇರಿದಂತೆ ಭಾರತದ ಮಿತ್ರರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ದೇಶಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಮ್ಯುನಿಸ್ಟ್ ರಾಷ್ಟ್ರದ ದುರ್ವರ್ತನೆಯನ್ನು ಖಂಡಿಸಿವೆ.

ಅಲ್ಲದೆ, ಏಷ್ಯಾಖಂಡದಲ್ಲೂ ಸಹ ಚೀನಾ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಪಾಕಿಸ್ತಾನ ಮತ್ತು ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಏಷ್ಯಾ ಖಂಡದಲ್ಲಿ ಯಾವ ದೇಶಗಳೂ ಚೀನಾಗೆ ಬೆಂಬಲ ನೀಡಿಲ್ಲ.

ಬದಲಿಗೆ ಜಪಾನ್, ಥೈಲ್ಯಾಂಡ್, ಬಾಂಗ್ಲಾದೇಶ, ಇಂಡೋನೇಷ್ಯಾ, ಮ್ಯಾನ್ಮಾರ್ ಮೊದಲಾದ ದೇಶಗಳು ಭಾರತದ ಪರ ಬೆಂಬಲ ವ್ಯಕ್ತಪಡಿಸಿವೆ.

ಇಡೀ ವಿಶ್ವಕ್ಕೇ ಕೊರೊನಾ ಸೋಂಕನ್ನು ಹಬ್ಬಿಸಿ ವ್ಯಾಪಕ ಸಾವು-ನೋವಿಗೆ ಕಾರಣವಾಗಿರುವ ಚೀನಾ ವಿರುದ್ಧ ಭುಗಿಲೆದ್ದಿರುವ ಅಸಮಾಧಾನದ ಹಿನ್ನೆಲೆಯಲ್ಲೂ ವಿಶ್ವದ ವಿವಿಧ ದೇಶಗಳು ಭಾರತಕ್ಕೆ ಸಾಥ್ ನೀಡುತ್ತಿರುವುದು ಚೀನಾ ಸೇನಾ ಪಡೆಯಲ್ಲಿ ಕಂಪನ ಉಂಟಾಗಿದೆ.

Facebook Comments