12 ಕುಖ್ಯಾತ ಭಯೋತ್ಪಾದಕರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.12- ವಿಶ್ವದ ವಿವಿಧ ರಾಷ್ಟ್ರಗಳಿಗೆ ಕಂಟಕ ಪ್ರಾಯವಾಗಿರುವ ಕುಪ್ರಸಿದ್ಧ ಉಗ್ರಗಾಮಿ ಸಂಘಟನೆಯ ಕುಖ್ಯಾತರ ಅಗ್ರ ನಾಯಕರಿಗೆ ಅಮೆರಿಕ ಮತ್ತೊಂದು ಬಲವಾದ ಹೊಡೆತ ನೀಡಿದೆ.

ನಿಷೇಧಿತ ತೆಹ್ರೀಕ್ -ಇ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ಸೇರಿದಂತೆ 12 ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ ಮತ್ತು ಹಲವು ಉಗ್ರರಿಗೆ ಹಾಗೂ ಅವರ ಬೆಂಬಲಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

9/11 ಭಯೋತ್ಪದಾಕ ದಾಳಿಯ ವಾರ್ಷಿಕೋತ್ಸವ ಮುನ್ನಾದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಹತ್ವದ ಆದೇಶ ಹೊರಡಿಸಿದೆ. ಹಿಜ್ಬುಲ್ಲಾ, ಹಮಾಸ್, ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್, ಐಸಿಸ್, ಐಸಿಸ್-ಫಿಲಿಪೈನ್ಸ್, ಐಸಿಸ್-ಪಶ್ಚಿಮ ಆಫ್ರಿಕಾ, ಮತ್ತು ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ ಸೇರಿದಂತೆ ಹಲವು ಉಗ್ರ ಸಂಘಟನೆಯ ಉಗ್ರರನ್ನು ವಿಶೇಷ ನಿಯೋಜಿತ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.

ನ್ಯೂಯಾರ್ಕ್ ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯುಟಿಸಿ) ಮತ್ತು ವಾಷಿಂಗ್ಟನ್‍ನಲ್ಲಿರುವ ಅಮೆರಿಕಾದ ರಕ್ಷಣಾ ಇಲಾಖೆ ಪೆಂಟಗನ್ ಮೇಲೆ ನಡೆದ ಭೀಕರ ಭಯೋತ್ಪಾದನೆ ದಾಳಿಗೆ ನಿನ್ನೆ 18 ವರ್ಷ. ಅಲ್‍ಖೈದಾ ಉಗ್ರರು ನಡೆಸಿದ ಈ ದಾಳಿಯಲ್ಲಿ 3,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

Facebook Comments