ಗೋವಾದ ಸೂರ್ಯ ಸ್ನಾನ ಉತ್ಸವಕ್ಕೆ ಹಿಂದೂ ಸಂಘಟನೆಗಳ ತೀವ್ರ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ,ಡಿ.15- ಕರಾವಳಿ ರಾಜ್ಯ ಗೋವಾದಲ್ಲಿ ನಡೆಯಲಿರುವ ವಿದೇಶಿ ಸಂಸ್ಕøತಿಯ ಸೂರ್ಯ ಸ್ನಾನ (ಸನ್ ಬಾತ್ ಕ್ಲಾಸಿಕ್) ಉತ್ಸವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ಇದಕ್ಕೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಉತ್ತರ ಗೋವಾದ ವಗಟೋರ್ ಕಡಲ ಕಿನಾರೆಯಲ್ಲಿ ಡಿ.27ರಿಂದ 29ರವರೆಗೆ ಸೂರ್ಯ ಸ್ನಾನ ಉತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದೆ. ಆದರೆ ಈ ಆಚರಣೆಗೆ ಇಂದು ಜನಜಾಗೃತಿ ಸಮಿತಿ
(ಎಚ್‍ಜೆಎಸ್) ಮತ್ತು ಗೋವಾ ಫಾವರ್ಡ್ ಬ್ಲಾಕ್ ಪಾರ್ಟಿ ಸೇರಿದಂತೆ ಅನೇಕ ಸಂಘಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ಸೂರ್ಯ ಸ್ನಾನ ಆಚರಣೆಯು ಭಾರತ ಸಂಸ್ಕøತಿಯಲ್ಲ. ಪಾಶ್ಚಿಮಾತ್ಯ ಸಂಸ್ಕøತಿಯ ಈ ಉತ್ಸವದಲ್ಲಿ ಮಾದಕ ವಸ್ತು ಸೇವನೆ, ಅಶ್ಲೀಲ ನೃತ್ಯ ಮೊದಲಾದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಮಿತಿಯ ಸಂಚಾಲಕ ಮನೋಜ್ ಸೊಲಂಕಿ ಆರೋಪಿಸಿದ್ದಾರೆ.
ಕಳೆದ ವರ್ಷ ಈ ಉತ್ಸವದಲ್ಲಿ ಅತ್ಯಧಿಕ ಮಾದಕ ವಸ್ತು ಸೇವನೆಯಿಂದ ಇಬ್ಬರು ವಿದೇಶಿ ಮಹಿಳೆಯರು ಮೃತಪಟ್ಟಿದ್ದರು.

ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್(ಇಡಿಎಂ) ಅಬ್ಬರದೊಂದಿಗೆ ಇದರಲ್ಲಿ ಭಾಗವಹಿಸುವ ವಿದೇಶಿಯರು ಮತ್ತು ಭಾರತದ ಯುವಕ, ಯುವತಿಯರು ಮೈ ಮರೆತು ಅಶ್ಲೀಲ ನೃತ್ಯ ಮಾಡುತ್ತಾರೆ. ಕಳೆದ ವರ್ಷ ಕೆಲವರು ಭಾರತದ ಧ್ವಜವನ್ನು ಧರಿಸಿ ನೃತ್ಯ ಮಾಡಿದ್ದಾರೆ ಇವು ಭಾರತದ ಭವ್ಯ ಸಂಸ್ಕøತಿಗೆ ಧಕ್ಕೆಯುಂಟು ಮಾಡುತ್ತದೆ ಎಂದು ಅವರು ಆಪಾದಿಸಿದ್ದಾರೆ.

ಗೋವಾ ಸರ್ಕಾರ ಈಗಾಗಲೇ ಈ ಉತ್ಸವಕ್ಕೆ ಅನುಮತಿ ನೀಡಿದೆ. ಈ ಕೂಡಲೇ ಇದನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ಭಾರೀ ಪ್ರತಿಭಟನೆ ನಡೆಸುವುದಾಗಿ ಸೋಲಂಕಿ ಎಚ್ಚರಿಕೆ ಕೊಟ್ಟಿದ್ದಾರೆ.

Facebook Comments

Sri Raghav

Admin