ಸಿಬ್ಬಂದಿ ಕೊರತೆ, 18 ವಿಮಾನ ಸಂಚಾರ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಬೆಂಗಳೂರು, ಡಿ.23 -ಪದೇ ಪದೇ ತಾಂತ್ರಿಕ ದೋಷಗಳಿಂದ ವಿವಾದಕ್ಕೆ ಸಿಲುಕಿರುವ ಗೋ ಏರ್ ವಿಮಾನ ಸಂಸ್ಥೆಯ 18 ವಿಮಾನಗಳು ಇಂದು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಸಿಬ್ಬಂದಿ ಕೊರತೆಯಿಂದ ನಿಲುಗಡೆಯಾಗಿವೆ.

ನವದೆಹಲಿ, ಮುಂಬೈ, ಬೆಂಗಳೂರು, ಗೋವಾ, ಶ್ರೀನಗರ, ಕೋಲ್ಕತ್ತಾ, ಸೇರಿದಂತೆ ವಿವಿಧ ನಗರಗಳಿಂದ ಇಂದು ಬೆಳಗ್ಗೆ ಗೋ ಏರ್ ಸಂಸ್ಥೆಯ ದೇಶೀಯ ಮಾರ್ಗದ ವಿಮಾನಗಳು ಸಂಚರಿಸಬೇಕಿತ್ತು. ಆದರೆ ಸಿಬ್ಬಂದಿ ಮತ್ತು ಕಾಕ್‍ಪಿಟ್ ತಜ್ಞರ ಕೊರತೆಯಿಂದಾಗಿ 18 ವಿಮಾನಗಳ ಸಂಚಾರ ರದ್ದುಗೊಂಡಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿ ಸಂಸ್ಥೆಗೆ ಹಿಡಿಶಾಪ ಹಾಕಿದ್ದಾರೆ.

ಗೋ ಏರ್ ಸಂಸ್ಥೆಯ ವಿಮಾನಗಳು ಅದರಲ್ಲೂ ಎ ನಿಯೋ -320 ವಿಮಾನಗಳು ಪದೇ ಪದೇ ತಾಂತ್ರಿಕ ದೋಷಗಳಿಗೆ ಒಳಗಾಗಿ ರದ್ದಾಗುತ್ತಿರುವ ಸಂದರ್ಭದಲ್ಲೇ ಈಗ ಸಿಬ್ಬಂದಿ ಕೊರತೆ ಸಮಸ್ಯೆ ಕಾಡುತ್ತಿದೆ.

Facebook Comments