ಶಿವಥಾಪ, ಪೂಜಾ ರಾಣಿಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, (ಪಿಟಿಐ) ಅ.31- ಒಲಂಪಿಕ್ ಪರೀಕ್ಷಾ ಪಂದ್ಯದ ಬಾಕ್ಸಿಂಗ್ ವಿಭಾಗದ ಫೈನಲ್‍ನಲ್ಲಿ ಭಾರತ ವಿಶ್ವ ಕಂಚು ಪದಕ ವಿಜೇತ ಶಿವ ಥಾಪ(63 ಕೆಜಿ) ಹಾಗೂ ಪೂಜ ರಾಣಿ(75 ಕೆಜಿ) ಬಂಗಾರದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಫೈನಲ್‍ನಲ್ಲಿ ನಾಲ್ಕು ಬಾರಿ ಏಷ್ಯನ್ ಪದಕಗಳನ್ನು ಗೆದ್ದಿರುವ ಶಿವ ಥಾಪ , ಕಜಕ್‍ಸ್ತಾನದ ಬಲಿಷ್ಠ ಎದುರಾಳಿ ಸನಾಟಲಿ ಟೊಲ್‍ಟಮ್ ಅವರನ್ನು 5-0 ಪಾಯಿಂಟ್‍ಗಳಿಂದ ನಿರಾಯಾಸವಾಗಿ ಮಣಿಸಿ ಹೊನ್ನಿನ ನಗೆ ಬೀರಿದರು. ಮಹಿಳೆಯರ ಫೈನಲ್ ಹಣಾಹಣಿಯಲ್ಲಿ ಏಷ್ಯಾ ಗೇಮ್ಸ್‍ನ ಕಂಚು ಪದಕ ವಿಜೇತೆ ಪೂಜ ರಾಣಿ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರ ವಿರುದ್ಧ ಗೆಲುವು ಸಾಧಿಸಿದರು.

91 ಕೆ.ಜಿ. ವಿಭಾಗದಲ್ಲಿ ಆಶೀಶ್ ಜಪಾನಿನ ಸೇವೋನ್ ವೊಕಜೋವಾ ಅವರ ವಿರುದ್ಧ ಪರಾಭವಗೊಂಡು ರಜತ ಪದಕಕ್ಕೆ ತೃಪ್ತಿ ಪಟ್ಟರು.

Facebook Comments