ಬರೋಬ್ಬರಿ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ ವ್ಯಕ್ತಿಯ ಫೋಟೊ ವೈರಲ್..!
ಮುಂಬೈ,ಜು.4- ಬರೋಬ್ಬರಿ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ನಿಯಂತ್ರಿಸಲು ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿ ಎಂದು ಪ್ರಧಾನಿ ಮೋದಿಯವರು ಕರೆ ಕೊಟ್ಟಿದ್ದಾರೆ.
ಉಳ್ಳವರು ತಮಗೆ ಬೇಕಾದಂತಹ ವಿನ್ಯಾಸವುಳ್ಳ ಮಾಸ್ಕ್ನ್ನು ಧರಿಸುತ್ತಾರೆ. ಎನ್-95 ಸೇರಿದಂತೆ ಆರೋಗ್ಯ ಇಲಾಖೆಯ ಶಿಫಾರಸ್ಸಿನ ವಿವಿಧ ಸರ್ಜಿಕಲ್ ಮಾಸ್ಕ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಅಲ್ಲದೆ ವಿವಿಧ ಕಂಪನಿಯವರು ಕೂಡ ವಿವಿಧ ಬಗೆಯ ಬಣ್ಣದ ಮಾಸ್ಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಆದರೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರೆ ಚಿಂಚ್ವಾಳ ನಿವಾಸಿ ಶಂಕರ್ ಕುರುಡೆ ಎಂಬುವರು 2.80 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿದ್ದಾರೆ.
ಅವರು ಈ ಮಾಸ್ಕ್ ಧರಿಸಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಶಂಕರ್, ಮಾಸ್ಕ್ ಧರಿಸಲು ಸೂಕ್ತವಾಗಿದ್ದು ಮತ್ತು ತೆಳುವಾಗಿದ್ದು ಉಸಿರಾಡಲು ಅನುಕೂಲಕರವಾಗಿದೆ.
ಸಣ್ಣ ರಂಧ್ರಗಳನ್ನು ಕೂಡ ಅಳವಡಿಸಲಾಗಿದೆ. ಈ ಮಾಸ್ಕ್ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದನ್ನು ತಯಾರಿಸಿ ಧರಿಸಲಾಗಿದೆ ಎಂದಷ್ಟೇ ಹೇಳಿದ್ದಾರೆ.