ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.16-ಕೊರೊನಾ ಸಂಕಷ್ಟದಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿದ್ದರೂ 10 ಗ್ರಾಂ ಆಭರಣ ಚಿನ್ನಕ್ಕೆ 70 ರೂ. ಏರಿಕೆಯಾಗಿದೆ.

ನಿಧಾನಗತಿಯಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿರುವ ನಡುವೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಆಭರಣ ಚಿನ್ನ 10 ಗ್ರಾಂಗೆ 70 ರೂ. ಏರಿಕೆ ಕಾಣುವ ಮೂಲಕ 47,650 ರೂ. ಆಗಿದೆ. ಶುದ್ದ ಚಿನ್ನ 10 ಗ್ರಾಂಗೆ 70 ರೂ. ಏರಿಕೆ ಕಾಣುವ ಮೂಲಕ 51,980 ರೂ. ಆಗಿದೆ.

ಕೊರೊನಾ ವೈರಸ್‍ನಿಂದಾಗಿ ಬೇರೆ ಕ್ಷೇತ್ರಗಳಲ್ಲಿ ಜನರು ಹೂಡಿಕೆ ಮಾಡಲು ಸಾದ್ಯವಾಗ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದಲ್ಲಿ ಏರಿಕೆ ಕಂಡಿದೆ.

ಕಳೆದ ವಾರ ಬೆಳ್ಳಿ ದರದಲ್ಲಿ ಏರಳಿತವಾಗಿತ್ತು. ಈ ಮೂಲಕ ಬೆಳ್ಳಿ ದರ ಕೆಜಿಗೆ 1000 ರೂ. ಇಳಿಕೆ ಕಾಣುವ ಮೂಲಕ 61 ಸಾವಿರ ರೂ. ಆಗಿದೆ.

Facebook Comments

Sri Raghav

Admin