ಚಿನ್ನದ ಬೆಲೆಯಲ್ಲಿ ತುಸು ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಬಂಗಾರದ ಬೆಲೆಯಲ್ಲಿ ಇಂದು ಇಳಿಕೆ ಕಂಡಿದ್ದು, ಕಳೆದ ಒಂದು ತಿಂಗಳಿನಿಂದ ಏರುಗತಿಯಲ್ಲಿದ್ದ ಬೆಲೆ ಏರಿಕೆ 10 ಗ್ರಾಂ ಚಿನ್ನಕ್ಕೆ 110ರೂ. ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ 46,400 ಆಸುಪಾಸಿನಲ್ಲಿದ್ದ ಬಂಗಾರ ಶೇ.24 ಪರ್ಸೆಂಟ್ ಇಳಿಕೆಯಾಗಿ ಇಂದು 46,252 ರೂ. ದಾಖಲಿಸಿದೆ. ನಿನ್ನೆ 46,362 ರೂ. ಬೆಲೆ ಇತ್ತು.

ಅದೇ ಹಾದಿಯಲ್ಲಿ ಸಾಗಿರುವ ಬೆಳ್ಳಿ ಸಹ ಇಂದು ಕೆಜಿಗೆ 66,400ರೂ. ಆಗಿದ್ದು, ನಿನ್ನೆ ಇದ್ದ 66,364ರೂ. ನಿಂದ 234ರೂ. ಕಡಿಮೆಯಾಗಿದೆ. ಕಳೆದ ವರ್ಷ ಆಗಸ್ಟ್‍ನಲ್ಲಿ 10 ಗ್ರಾಂ ಚಿನ್ನಕ್ಕೆ 56,191ರೂ. ಅತ್ಯಧಿಕ ಬೆಲೆ ದಾಖಲಿಸಿತ್ತು. ನಂತರದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿತ್ತು. ಅತಿ ದುಬಾರಿ ಬೆಲೆ ಚಿನ್ನದ ದಾಖಲೆ 10 ಗ್ರಾಂಗೆ 9939 ಅಂದರೆ ಶೇ.17.68ರಷ್ಟು ಹೆಚ್ಚಳ ಕಂಡಿತ್ತು.

ಆದರೆ, ಆ ದುಪ್ಪಟ್ಟು ದರವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹಿರಿಯ ತಾಂತ್ರಿಕ ಸಂಶೋಧನಾ ವಿಶ್ಲೇಷಕರಾದ ಭವಿಕ್ ಪಟೇಲ್ ಹೇಳಿದ್ದಾರೆ. ಇದರ ನಡುವೆ ಯುಎಸ್ ಬಾಂಡ್‍ಗಳು ಏರಿಕೆ ಕಂಡರೂ ಯುಎಸ್ ಸೆಂಟ್ರಲ್ ಬ್ಯಾಂಕ್ ಪ್ರಸ್ತುತ ಇರುವ ವಿತ್ತೀಯ ನಿಯಮ ಬದಲಾವಣೆಯಲ್ಲಿ ಆತುರ ತೋರಲಿಲ್ಲ.

ಇದು ಚಿನ್ನದ ಬೆಲೆ ಇಳಿಕೆಗೆ ಸಕಾರಾತ್ಮಕವಾಗಿ ಪರಿಣಮಿಸಿತು. ಅಲ್ಲದೆ, ಷೇರು ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದ ನಡುವೆ ಬೆಲೆ ನಿಯಂತ್ರಣಕ್ಕಾಗಿ ಹರಸಾಹಸಪಟ್ಟಿತ್ತು. ಹಾಗಾಗಿ ಎಂಸಿಎಕ್ಸ್ ಚಿನ್ನ ಕಳೆದ ಮಾರ್ಚ್‍ನಲ್ಲಿ 44,150 ಇದ್ದ ಬೆಲೆ 44,300 ರಿಂದ 45,300 ಆಸುಪಾಸಿನ ಬೆಲೆಯನ್ನೇ ಕಾಯ್ದಿಟ್ಟುಕೊಂಡಿತ್ತು ಎಂದು ಪಟೇಲ್ ಹೇಳಿದ್ದಾರೆ.

Facebook Comments