ದೀಪಾವಳಿಗೆ `ಬಂಗಾರ’ದ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.27- ಈ ಬಾರಿಯ ದೀಪಾವಳಿ ಜನರಲ್ಲಿ ಸಂತಸದ ಜೊತೆಗೆ ದುಬಾರಿ ಬೆಲೆ ತೆರುವಂತೆಯೂ ಮಾಡಿದೆ. ಒಂದೆಡೆ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಗಗನಮುಖಿಯಾಗಿದ್ದರೆ, ಮತ್ತೊಂದೆಡೆ ಹಳದಿ ಲೋಹ (ಚಿನ್ನ)ದ ಬೆಲೆಯೂ ಏರುಮುಖವಾಗಿದೆ. ದೀಪಾವಳಿ ಅಥವಾ ಧನ್‍ತೇರಾಸ್ ಹಬ್ಬಕ್ಕೆ ಸಾಮಾನ್ಯವಾಗಿ ಕೆಲವು ಜನರು ಚಿನ್ನವನ್ನು ಖರೀದಿಸುತ್ತಾರೆ. ಆದರೆ ಈ ಬಾರಿ ಬಂಗಾರ ಕೊಳ್ಳಬೇಕೆಂಬುವವರ ಆಸೆಗೆ ಬೆಲೆ ಏರಿಕೆಯೂ ಶಾಕ್ ನೀಡಿದೆ.

ದೇಶದ ಆರ್ಥಿಕತೆಯು ಕುಂಠಿತಗೊಂಡಿರುವುದರಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹಣವನ್ನು ಹೂಡಲು ಮುಗಿಬಿದ್ದಿದ್ದಾರೆ, ಇದರಿಂದ ಖರೀದಿದಾರರ ಜೇಬು ಸುಡುವುದರಿಂದ ಈ ಬಾರಿ ದೀಪಾವಳಿಯಲ್ಲಿ ಚಿನ್ನದ ಖರೀದಿಯಲ್ಲೂ ಕುಂಠಿತವಾಗಿದೆ. ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ. ಹೆಚ್ಚಾಗಿದ್ದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯು 39,240 ರೂ.ಗಳಿಗೆ ಮುಟ್ಟಿದ್ದರೆ, ಬೆಳ್ಳಿಯಲ್ಲೂ ಕೆಜಿಗೆ 670 ರೂ. ಏರಿಕೆಯಾಗುವ ಮೂಲಕ 47,680 ರೂ.ಗಳಾಗಿವೆ.

ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಏರಿಕೆಯಾಗಿತ್ತಾದರೂ ದೀಪಾವಳಿ ಹಬ್ಬಕ್ಕೆ 10 ಗ್ರಾಂ ಚಿನ್ನಕ್ಕೆ 38 ಸಾವಿರ ರೂ.ಗಳು ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತಾದರೂ ಈಗ 40 ಸಾವಿರದ ಸನಿಹಕ್ಕೆ ಬಂದಿದೆ, ಇನ್ನೊಂದು ವಾರದಲ್ಲಿ ಅದರ ಬೆಲೆ 45 ಸಾವಿರಕ್ಕೆ ಮುಟ್ಟಿದರೂ ಅಚ್ಚರಿ ಪಡಬೇಕಾಗಿಲ್ಲ, ಬೆಲೆ ಹೆಚ್ಚಾದರೂ ಪರವಾಗಿಲ್ಲ ನಮ್ಮ ಕೈಗೆಟುಕುವ ದರದಲ್ಲೇ ಚಿನ್ನವನ್ನು ಖರೀದಿಸೋಣ ಎಂದು ಜನ ಮಾರಾಟಕ್ಕೆ ಮುಗಿಬಿದ್ದರೆ ಆಗ ಬಂಗಾರದ ಬೆಲೆಯಲ್ಲಿ ಇಳಿಮುಖವಾಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ಬೆಲೆ ಎಷ್ಟಾದರೇನು ಹಬ್ಬ, ಮದುವೆ, ಮುಂತಾದ ಸಮಾರಂಭಗಳಿಗೆ ಚಿನ್ನವನ್ನು ಖರೀದಿಸಲೇಬೇಕೆಂಬುವವರು ಹೆಚ್ಚು ಹಣವನ್ನು ಕೊಟ್ಟು ಬಂಗಾರವನ್ನು ಖರೀದಿಸಿದರೆ, ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಯಾಗಿ ಮಾರಾಟ ಚೇತರಿಸಿಕೊಳ್ಳದೇ ಇದ್ದರೆ ಆಗ ಉದ್ಯೋಗ ಕಡಿತ, ಮಳಿಗೆಗಳನ್ನು ಮುಚ್ಚುವ ಸ್ಥಿತಿ ಎದುರಾಗಲಿದೆ.

Facebook Comments