ಚಿನ್ನ ಕಳ್ಳಸಾಗಣೆ ಪ್ರಕರಣ : ಸ್ವಪ್ನಾ ಸುರೇಶ್ ಜಾಮೀನು ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ, ಆ.10-ಭಾರೀ ಚರ್ಚೆಗೆ ಗ್ರಾಸವಾಗಿರುವ ಕೋಟ್ಯಂತರ ರೂ. ಮೌಲ್ಯದ ಕೇರಳ ಚಿನ್ನ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ನ್ಯಾಯಾಲಯ ಇಂದು ವಜಾಗೊಳಿಸಿದೆ.

ಎನ್‍ಐಎ ಸವಿವರವಾಗಿ ಸಲ್ಲಿಸಿದ ಕೇಸ್ ಡೈರಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯವು ಸ್ವಪ್ನಾ ಸುರೇಶ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಕಳೆದ ವರ್ಷ ನವೆಂಬರ್‍ನಿಂದ ರಾಜತಾಂತ್ರಿಕ ಮಾರ್ಗದ ಮೂಲ 100 ಕೋಟಿ ರೂ. ಮËಲ್ಯದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಪಾತ್ರದ ಬಗ್ಗೆ ತನಿಖಾ ಸಂಸ್ಥೆ ಕೋರ್ಟ್‍ಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದೆ.

ಕೇಸ್ ಡೈರಿ ಮತ್ತು ಪುರಾವೆಗಳನ್ನು ಪರಿಗಣಿಸಿದ ಎನ್‍ಐಎ ವಿಶೇಷ ನ್ಯಾಯಾಲಯವು ಆಕೆಗೆ ಜಾಮೀನು ನೀಡಲು ಪ್ರಬಲವಾಗಿ ವಿರೋಸಿತು. ಈ ಪ್ರಕರಣದ ಬಗ್ಗೆ ಮತ್ತಷ್ಟು ತೀವ್ರ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ತಿಳಿಸಿದೆ.

Facebook Comments

Sri Raghav

Admin