ಸರ್ಕಾರದ ದುಡ್ಡಲ್ಲಿ ಚಿನ್ನದ ರಥ ಮಾಡಿಸುತ್ತಿರುವ ಸಿಎಂ ವಿರುದ್ಧ ವಕೀಲ ರಾಮಕೃಷ್ಣ ಏಕಾಂಗಿ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.30-ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ಕಾರದ ಹಣದಿಂದ ಕುಕ್ಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ಚಿನ್ನದ ರಥ ಮಾಡಿಸಲು ಹೊರಟಿರುವುದನ್ನು ವಿರೋಧಿಸಿ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪಡುವಾರಹಳ್ಳಿಯ ರಾಮಕೃಷ್ಣ ಏಕಾಂಗಿ ಹೋರಾಟ ನಡೆಸಿದರು.

ನಗರದ ನ್ಯಾಯಾಲಯದ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಇಂದು ಬೆಳಿಗ್ಗೆ ರಾಮಕೃಷ್ಣ ಅವರು ಪ್ರತಿಭಟನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೊಕ್ಕಸದಿಂದ ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಕೋಟ್ಯಂತರ ರೂ. ವೆಚ್ಚದಲ್ಲಿ ಚಿನ್ನದ ರಥ ನೀಡಲು ಹೊರಟಿರುವ ಮುಖ್ಯಮಂತ್ರಿಗಳ ಉದ್ದೇಶವೇನೆಂಬುದನ್ನು ತಿಳಿಸಬೇಕೆಂದು ಒತ್ತಾಯಿಸಿದರು.

ರೈತರ ಸಾಲ ಮನ್ನಾಕ್ಕೆ ರಾಜ್ಯದ ಅಭಿವೃದ್ಧಿಗೆ ಹಣ ಬಳಸದೆ ರಥ ನಿರ್ಮಾಣಕ್ಕೆ ಹಣ ನೀಡುವ ಉದ್ದೇಶ ಏನೆಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕೆಂದು ರಾಮಕೃಷ್ಣ ಆಗ್ರಹಿಸಿದರು.

Facebook Comments

Sri Raghav

Admin