ಗೋಲ್ಡನ್ ಸ್ಟಾರ್ ಗಣೇಶ್ @ 38

ಈ ಸುದ್ದಿಯನ್ನು ಶೇರ್ ಮಾಡಿ

Gani--01

ಬೆಂಗಳೂರು,ಜು.2- ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು ತಮ್ಮ 38ನೇ ಹುಟ್ಟಹಬ್ಬವನ್ನು ಕುಟುಂಬಸ್ಥರು ಮತ್ತು ಅಭಿಮಾನಿಗಳೊಂದಿಗೆ ಸಡಗರ, ಸಂಭ್ರಮದಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ರಾತ್ರಿಯಿಂದಲೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯ ಮುಂದೆ ಕಾದುಕುಳಿತು ಹುಟ್ಟುಹಬ್ಬಕ್ಕೆ ಶುಭ ಕೋರಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ನನ್ನ ಹುಟ್ಟುಹಬ್ಬವನ್ನು ತಮ್ಮ ಹುಟ್ಟುಹಬ್ಬ ಎಂದುಕೊಂಡು ರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿ, ಬ್ಯಾನರ್, ಕಟೌಟ್ ಹಾಕಿ ಸಂಭ್ರಮಿಸುತ್ತಿರುವ ನನ್ನ ಅಭಿಮಾನಿಗಳಿಗೆ ನಾನು ಚಿರ ಋಣಿ ಎಂದರು. ಅಭಿಮಾನಿಗಳು ಸಂತೋಷಪಡುವಂತಹ ಚಿತ್ರಗಳನ್ನೇ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಚೆಲ್ಲಾಟ, ಹುಡುಗಾಟ, ಮುಂಗಾರು ಮಳೆ, ಅರಮನೆ, ಖುಷಿ-ಖುಷಿ, ಮುಂಜಾನೆ, ಕೃಷ್ಣ, ಉಲ್ಲಾಸ-ಉತ್ಸಾಹ, ರೋಮಿಯೋ, ಮುಗುಳ್ನಗೆ, ದಿಲ್ ರಂಗೀಲಾ, ಪಟಾಕಿ, ಚಮಕ್ ಸೇರಿದಂತೆ ಇನ್ನು ಹಲವಾರು ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಗೆಲ್ಲಿಸಿದ್ದೀರಾ ಇನ್ನು ಮುಂದೆಯೂ ಇದೇ ರೀತಿ ನನ್ನನ್ನು ಪ್ರೋತ್ಸಾಹಿಸಿ ಎಂದರು.  ನನಗೆ ಹಾರರ್ ಚಿತ್ರ ಎಂದರೆ ಭಯ. ಆದರೆ ನನ್ನ ಮಗಳು ಹಾರರ್ ಚಿತ್ರ ಮಾಡುವಂತೆ ಹೇಳಿದ್ದಳು. ಅವಳ ಆಸೆಯಂತೆ ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿರುವ ಹೆಸರಿಡದ ಹಾರರ್- ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದರು.

ಗಣೇಶ್ ಹುಟ್ಟುಹಬ್ಬಕ್ಕೆ ಪತ್ನಿ ಶಿಲ್ಪ ಅವರು ಪ್ರತಿ ವರ್ಷವು ಉಡುಗೊಡೆಗಳನ್ನು ಕೊಡುತ್ತಿದ್ದರು. ಆದರೆ ಈ ಬಾರಿ ಗಿಫ್ಟ್ ಇಲ್ಲದಿದ್ದರೂ ಅವರ ಹೋಂ ಬ್ಯಾನರ್‍ನಲ್ಲೇ ಗೀತಾ ಎಂಬ ಚಿತ್ರವನ್ನು ಶಿಲ್ಪ ಗಣೇಶ್ ಅವರು ನಿರ್ಮಿಸುತ್ತಿರುವುದೇ ಕೊಡುಗೆಯಾಗಿದೆ. ಈ ಹಿಂದೆ ಶಂಕರ್‍ನಾಗ್ ಅಭಿನಯದ ಗೀತಾ ಚಿತ್ರವು ಅತ್ಯಂತ ಯಶಸ್ವಿ ಪ್ರದರ್ಶನಗೊಂಡಿರುವುದನ್ನು ಸ್ಮರಿಸಬಹುದಾಗಿದ್ದು ಅದೇ ಟೈಟಲ್‍ನ ಈ ಚಿತ್ರದಲ್ಲಿ ಗಣೇಶ ನಾಯಕನಾಗಿ ನಟಿಸುತ್ತಿದ್ದಾರೆ. ಗಣೇಶ್ ಹುಟ್ಟುಹಬ್ಬದ ಅಂಗವಾಗಿ ಗಣೇಶ್ ನಟನೆಯ ಆರೆಂಜ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.

Facebook Comments

Sri Raghav

Admin