2,9 ಶತಕೋಟಿ ಡಾಲರ್ ದಂಡ ಪಾವತಿಸಿದೆ ‘ಗೋಲ್ಡ್ ಮ್ಯಾನ್’

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಅ.23-ಭಾರೀ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕ್ರಿಮಿನಲ್ ಆಪಾದನೆಗಳಿಂದ ಪಾರಾಗಲು ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್‍ಮ್ಯಾನ್ ಸ್ಯಾಸೆಸ್ 2.9 ಶತಕೋಟಿ ಡಆಲರ್‍ಗಳ ಬೃಹತ್ ದಂಡ ಮೊತ್ತವನ್ನು ಪಾವತಿಸಲು ಸಮ್ಮತಿಸಿದೆ.  ಅಮೆರಿಕದ ಭ್ರಷ್ಟಾಚಾರ ಪ್ರಕರಣದ ಸಂಬಂಧ ಇಷ್ಟು ದೊಡ್ಡ ಮೊತ್ತದ ಜುಲ್ಮಾನೆ ಪಾವತಿಸುತ್ತಿರುವುದು ಇದೇ ಮೊದಲು. 1 ಎಮ್ ಡಿಬಿ ಮಲೇಷ್ಯಾ ಲಂಚ ಹಗರಣದ ಸಂಬಂಧ ಈ ಸಂಸ್ಥೆಯು 2.9 ಶತಕೋಟಿ ಡಾಲರ್‍ಗಳ ಅತ್ಯಧಿಕ ದಂಡ ಪಾವತಿಸಲು ಒಪ್ಪಿಗೆ ನೀಡಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಪ್ರಕಟಿಸಿದೆ.

1.6 ಶತಕೋಟಿ ಡಾಲರ್ ಲಂಚ ಪ್ರಕರಣದಲ್ಲಿ ತನ್ನ ತಪ್ಪು ಮತ್ತು ಹೊಣೆಗಾರಿಕೆಯನ್ನು ಕಂಪನಿ ಒಪ್ಪಿಕೊಂಡಿದೆ. ಅಮೆರಿಕದ ಆರ್ಥಿಕ ವ್ಯವಸ್ಥೇ ಮೂಲಕ ಅತಿದೊಡ್ಡ ಮತ್ತು ವ್ಯವಸ್ಥಿತ ಲಂಚ ಅವ್ಯವಹಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ ಎಂದು ಉಸ್ತವಾರಿ ಸಹಾಯಕ ಅಟಾರ್ನಿ ಜನಲರ್ ಬ್ರಿಯಾನ್ ಸಿ. ರ್ಯಾಬಿಟ್ ಹೇಳಿದ್ಧಾರೆ.

ಮಲೇಷ್ಯಾ ಸರ್ಕಾರದ ಸಾರ್ವಭೌಮತ್ವ ಸಂಪತ್ತು ನಿಧಿಗಾಗಿ 6.5 ಶತಕೋಟಿ ಡಾಲರ್ ಕ್ರೋಢೀಕರಿಸಲು ಗೋಲ್ಡ್‍ಮ್ಯಾನ್ ಸ್ಯಾಷೆಸ್ ಸಂಸ್ಥೇ ನೆರವು ನೀಡಿತ್ತು. ಆದರೆ 2009 ರಿಂದ 2015ರ ನಡುವೆ ಉನ್ನತಾಧಿಕಾರಿಗಳು ಮತ್ತು ಅವರ ಅದೀನ ಸಿಬ್ಬಂಧಿಗಳಿಂದ ನಿಧಿಯಲ್ಲಿ 4.5 ಶತಕೋಟಿ ಡಾಲರ್‍ಗಳಿಗೂ ಹೆಚ್ಚು ಮೊತ್ತವನ್ನು ಕಳವು ಮಾಡಲಾಯಿತು ಎಂದು ಕಾನೂನು ಇಲಾಖೆ ತಿಳಿಸಿದೆ.

Facebook Comments