ಬ್ರೇಕಿಂಗ್ : ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಆರ್‌ಬಿಐ, ಏನದು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.12-ವಿದ್ಯುನ್ಮಾನ ವ್ಯವಸ್ಥೆ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ, ಆರ್‍ಟಿಜಿಎಸ್ ಮತ್ತು ಎನ್‍ಇಎಫ್‍ಟಿ ಮೂಲಕ ಹಣ ವರ್ಗಾಯಿಸುವ ಗ್ರಾಹಕರಿಗೆ ವಿಧಿಸುತ್ತಿದ್ದ ಎಲ್ಲಾ ಶುಲ್ಕಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಮನ್ನಾ ಮಾಡಲು ನಿರ್ಧರಿಸಿದೆ.

ಇದು ಜು.1ರಿಂದ ಜಾರಿಗೆ ಬರಲಿದೆ. ಇದರ ಪಲಾನುಭವವನ್ನು ಆಯಾ ಗ್ರಾಹಕರಿಗೆ ನೀಡುವಂತೆ ಆರ್‍ಬಿಐ ಎಲ್ಲಾ ಬ್ಯಾಂಕ್‍ಗಳಿಗೆ ಸೂಚನೆ ನೀಡಿದೆ.

ಆರ್‍ಟಿಜಿಎಸ್-ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ ಸಿಸ್ಟಮ್ ಮತ್ತು ಎನ್‍ಇಎಫ್‍ಟಿ- ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ಇವೆರಡರ ಮೂಲಕ ಎರಡು ಲಕ್ಷ ರೂ.ಗಳವರೆಗೆ ಹಣ ವರ್ಗಾವಣೆ ವಹಿವಾಟು ನಡೆಸುವ ಗ್ರಾಹಕರಿಗೆ ಈ ಸೌಲಭ್ಯ ಲಭಿಸಲಿದೆ.

ಈ ಹಿಂದೆ ಈ ವಿದ್ಯುನ್ಮಾನ ವಿಧಾನಗಳ ಮೂಲಕ ಹಣ ವರ್ಗಾವಣೆ ಮಾಡಲು ಗ್ರಾಹಕರು ಶುಲ್ಕವನ್ನು ಪಾವತಿಸಬೇಕಿತ್ತು. ಎನ್‍ಇಎಫ್‍ಟಿ ಮೂಲಕ ವಹಿವಾಟು ನಡೆಸಿದರೆ 5 ರೂ.ಗಳವರೆಗೆ ಹಾಗೂ ಎನ್‍ಇಎಫ್‍ಟಿ-ಆರ್‍ಟಿಜಿಎಸ್ ಇವರೆಡರ ನಡುವೆ ಹಣಕಾಸು ವರ್ಗಾವಣೆ ವಹಿವಾಟು ನಡೆಸಿದರೆ 50ರೂ.ಗಳ ವರೆಗೆ ಶುಲ್ಕ ವಿಧಿಸಲಾಗುತ್ತಿತ್ತು.

ಜುಲೈ 1ರಿಂದ ಈ ಶುಲ್ಕ ಮನ್ನಾವಾಗಲಿದೆ. ಈ ಮೂಲಕ ಆನ್ಲೈನ್ ನಲ್ಲಿ ಹಣ ವರ್ಗಾವಣೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ .

Facebook Comments

Sri Raghav

Admin