ಮದರ್ಸ್ ಡೇ : ಡೂಡಲ್ ಮೂಲಕ ತಾಯಂದಿರಿಗೆ ಗೂಗಲ್ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 10-ಇಂದು ಮದರ್ಸ್ ಡೇ. ಪ್ರತಿಯೊಂದು ಕುಟುಂಬದ ಮಹತ್ವದ ಹೊಣೆ ನಿಭಾಯಿಸುವ ಮಾತೆಯರಿಗೆ ಇಂದು ವಿಶೇಷ ಅಭಿನಂದನೆ ಮತ್ತು ಗೌರವ ಸಲ್ಲಿಸಲಾಗುತ್ತಿದೆ. ಅಂತೆಯೇ ವಿಶ್ವವಿಖ್ಯಾತ ಸರ್ಚ್ ಎಂಜಿನ್ ಗೂಗಲ್, ಡೂಡಲ್ ಮೂಲಕ 2020ನೆ ಸಾಲಿನ ಅಮ್ಮಂದಿರ ದಿನಕ್ಕೆ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ.

ಮಾತೆಯರ ಪ್ರೀತಿ-ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ತಾಯಂದಿರು ತೋರಿಸುವ ಕಾಳಜಿ ಮತ್ತು ಕುಟುಂಬದ ಹೊಣೆಯ ಸಂಕೇತವಾಗಿ ವಿಶ್ವ ಅಮ್ಮಂದಿರ ದಿನವನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮದರ್ಸ್ ಡೇ ಸಂದರ್ಭದಲ್ಲಿ ವರ್ಚುಯಲ್ ಕಾರ್ಡ್, ಗ್ರೀಟಿಂಗ್ಸ್ ತಯಾರಿಸಿ ನಿಮ್ಮ ಮಾತೆಯರಿಗೆ ನೀಡಿ ಎಂದು ಗೂಗಲ್ ಸಂದೇಶ ನೀಡಿದೆ.

ಗೂಗಲ್ ಡೂಡಲ್ ಮೂಲಕ ಸಂದೇಶ ನೀಡಿದೆ. ಹ್ಯಾಪಿ ಮದರ್ಸ್ ಡೇ. ಕಲೆ, ಮತ್ತು ಕಸೂತಿ ತಯಾರಿಸಿ ಗೂಗಲ್ ಮೂಲಕ ಹಂಚಿಕೊಳ್ಳಿ ಎಂದು ಸರ್ಚ್ ಎಂಜಿನ್ ತಿಳಿಸಿದೆ.

ವರ್ಚುವಲ್ ಕಾರ್ಡ್ ಮತ್ತು ವಿವಿಧ ವಿನ್ಯಾಸ ಶುಭಾಶಯ ಪತ್ರಗಳನ್ನು ಸಲ್ಲಿಸಲು ಗೂಗಲ್ ತನ್ನ ಸರ್ಚರ್‍ಗಳಿಗೆ ನೆರವಾಗಿದೆ. ಗೂಗಲ್ ಕ್ಲಿಕ್ ಮಾಡಿದರೆ ಅದರಲ್ಲಿ ಗೂಗಲ್ ಲೆಟರ್ ಎಂಬ ಪದಗಳು ಕಾಣಿಸುತ್ತದೆ. ಅಲ್ಲಿ ಕಾರ್ಡ್‍ಗಳು ಮತ್ತು ಶುಭಾಶಯ ಪತ್ರಗಳನ್ನು ಸೃಷ್ಟಿಸಲು ಆಯ್ಕೆ ಮಾಡಿಕೊಳ್ಳಬಹುದು.

ಅಲ್ಲಿ ಕಾಣಿಸುವ ಡಿಸೈಲ್ ಕ್ಲಿಕ್ ಮಾಡಿ ಖಾಲಿ ಕಾರ್ಡ್ ಇಡಬಹುದು. ಅಲ್ಲಿ ಡಿಸೈನ್ ಕ್ರಾಫ್ಟ್ ಇರುತ್ತದೆ. ಕಾರ್ಡ್ ಪೂರ್ಣಗೊಂಡ ಬಳಿಕ ಸೆಂಡ್ ಎಂಬ ರವಾನೆ ಸಂದೇಶ ಗೋಚರಿಸುತ್ತದೆ. ನಿಮ್ಮ ಮೆಚ್ಚಿನ ಅಮ್ಮನ ಫೋಟೋದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಷೇರ್ ಮಾಡಬಹುದು.

Facebook Comments

Sri Raghav

Admin