ಡೂಡಲ್ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದ ಗೂಗಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.26- ವಿಶ್ವ ವಿಖ್ಯಾತ ಸರ್ಚ್ ಎಂಜಿನ್ ಗೂಗಲ್ 71ನೆ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಡೂಡಲ್ ಮೂಲಕ ದೇಶದ ಜನತೆಗೆ ಶುಭ ಕೋರಿದೆ. ಸರ್ಚ್ ಎಂಜಿನ್‍ನ ಚಿತ್ರದಲ್ಲಿ ಭಾರತದ ಭವ್ಯ ಸಂಸ್ಕøತಿ, ಪರಂಪರೆ ಮತ್ತು ವೈವಿಧ್ಯತೆ ಬಿಂಬಿಸುವ ಚಿತ್ರಗಳು ದೇಶದ ಮಹತ್ವದ ಸ್ಥಳಗಳು ಮತ್ತು ವಾದ್ಯಗಳ ಚಿತ್ರವಿದೆ. ಇದು ಭಾರತದ ಭವ್ಯತೆಯನ್ನು ಸಮಗ್ರ ರೂಪದಲ್ಲಿ ಬಿಂಬಿಸಲಾಗಿದೆ.

ವಿಶೇಷ ಸಂದರ್ಭಗಳಲ್ಲಿ ಮತ್ತು ಮಹಾಪುರುಷರು, ಖ್ಯಾತನಾಮರ ಜನ್ಮದಿನದ ಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್‍ಗಳನ್ನು ರಚಿಸಿ ಗಮನ ಸೆಳೆಯುತ್ತಿದೆ.

Facebook Comments