ಗೂಗಲ್ ಪೇನಲ್ಲಿ ಹಣ ವರ್ಗಾವಣೆಮಾಡುವಾಗ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಜು.22- ಗೂಗಲ್ ಪೇ ಮುಖಾಂತರ ಹಣ ವರ್ಗಾವಣೆ ವೇಳೆ ಅಪರಿಚಿತನೊಂದಿಗೆ ವ್ಯವಹರಿಸಿ ಹಣ ಕಳೆದುಕೊಂಡ ಪ್ರಸಂಗ ಶ್ರೀರಾಮನಗರದಲ್ಲಿ ನಡೆದಿದೆ.

ಬಡಾವಣೆಯ ಮುರಳಿ ಬಾಬು ಎನ್ನುವ ವ್ಯಕ್ತಿ ಗೂಗಲ್ ಪೇ ಮುಖಾಂತರ ಹಣ ವರ್ಗಾವಣೆ ಮಾಡಬೇಕಾಗಿದ್ದು , ಈ ಸಂದರ್ಭದಲ್ಲಿ ತನ್ನ ಮೊಬೈಲ್ ಸರಿ ಇಲ್ಲದ ಕಾರಣ ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಿದ್ದರು.

ಈ ವೇಳೆ ಟೋಲ್ ಫ್ರೀ ಸಂಪರ್ಕದ ವೇಳೆ ನೀಡಿದ ನಂಬರ್ ಅನ್ನು ಸಂಪರ್ಕಿಸಿದಾಗ ಅದು ಮೋಸಗಾರನ ನಂಬರ್ ಆಗಿತ್ತು. ಅಷ್ಟರೊಳಗಾಗಿ ಆ ಅಪರಿಚಿತ ವ್ಯಕ್ತಿ ಮುರಳಿ ಬಾಬುವಿನಿಂದ 39,999+49,500+10,999 ರೂ.ನಂತೆ ಮೂರು ಬಾರಿ ಒಟ್ಟು 100498 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ.

ನಂತರ ಮುರಳಿ ಬಾಬುವಿಗೆ ಹಣ ವರ್ಗಾವಣೆಯಾಗದಿರುವುದು ತಿಳಿದು ಬಂದಿದ್ದು , ಖಾತೆಯಲ್ಲಿ ಮಾತ್ರ ಹಣ ಕಡಿತವಾಗಿತ್ತು. ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು , ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin