ಜಿ-ಮೇಲ್ ಸೇವೆಯಲ್ಲಿ ವ್ಯತ್ಯಯ, ವರ್ಕ್ ಫ್ರಂ ಹೋಮ್ ಪರದಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.20- ಸಾರ್ ಫೈಲ್ ಅಟ್ಯಾಚ್ ಆಗುತ್ತಿಲ್ಲ, ನನ್ನ ಮೇಲ್‍ಗೆ ಹೋಗಲು ಕೂಡ ಆಗುತ್ತಿಲ್ಲ, ನೀವು ಕಳುಹಿಸಿರುವ ವಿವರಗಳನ್ನು ಡೌನ್‍ಲೌಡ್ ಮಾಡಲು ಆಗುತ್ತಿಲ್ಲ ಎಂಬ ದೂರುಗಳು ಇಂದು ವಿಶ್ವದೆಲ್ಲೆಡೆ ಸಾಮಾನ್ಯವಾಗಿ ಕೇಳಿಬರುತ್ತಲೇ ಇವೆ.

ಇಂದು ಬೆಳಗ್ಗೆಯಿಂದಲೇ ಈ ಸಮಸ್ಯೆ ಎದುರಾಗಿದ್ದು ಅದರಿಂದ ಸಾಕಷ್ಟು ಮಂದಿ ನೌಕರರು ಪರದಾಡುವಂತಾಯಿತು. ಕೊರೊನಾ ಹಿನ್ನೆಲೆಯಲ್ಲಿ ಸಾಫ್ಟ್‍ವೇರ್ ಲೋಕದ ಬಹುತೇಕ ಮಂದಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು ಅವರು ಕೂಡ ಇಂದು ಈ ಸಮಸ್ಯೆಯನ್ನು ಎದುರಿಸಿದ್ದಾರೆ,

ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅವರು ನಾನಾ ಮಾರ್ಗಗಳನ್ನು ಅನುಸರಿಸಿ ಪರಿಹಾರ ಕಂಡುಕೊಂಡರಾದರೂ, ಜಿ-ಮೇಲ್ ಅನ್ನೇ ನಂಬಿಕೊಂಡಿದ್ದವರು ಮಾತ್ರ ಇಡೀ ವಿಶ್ವದಾದ್ಯಂತ ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಸರ್ವೀಸ್ ಇಲ್ಲದೆ ಪರದಾಡಿದರು.

ಭಾರತದಲ್ಲಷ್ಟೇ ಅಲ್ಲ ಅಮೆರಿಕಾ, ಜಪಾನ್, ಆಸ್ಟ್ರೇಲಿಯಾದಂತಹ ಸಾಫ್ಟ್‍ವೇರ್‍ನಲ್ಲಿ ಮುಂದುವರೆದಿರುವ ರಾಷ್ಟ್ರಗಳಲ್ಲೂ ಕೂಡ ಈ ರೀತಿಯ ಸಮಸ್ಯೆಗಳು ಎದುರಾಗಿದ್ದವು.

ಮೂಲಗಳ ಪ್ರಕಾರ ಶೇ.59ರಷ್ಟು ಮಂದಿ ಫೈಲ್ ಅಟ್ಯಾಚ್ ಆಗದೆ ಪರದಾಡಿದರೆ, ಶೇ.22 ಮಂದಿ ಲಾಗಿನ್ ತೊಂದರೆ ಹಾಗೂ ಶೇ. 18 ಮಂದಿ ಫೈಲ್ ರಿಸೀವ್ ಮಾಡಿಕೊಳ್ಳಲು ಪರದಾಡಿದರು.

ಈ ಬಗ್ಗೆ ಗೂಗಲ್‍ನವರು ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ, ಅದನ್ನು ಶೀಘ್ರ ಬಗೆಹರಿಸುತ್ತೇವೆ ಎಂದು ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದರು, ಆದರೆ ಜೀ-ಮೇಲ್ ಸರ್ವಿಸ್ ಸಿಗದವರ ಪಾಡೇನು..?

ಕಳೆದ ಜುಲೈನಲ್ಲೂ ಇದೇ ರೀತಿಯ ಸಮಸ್ಯೆ ಗೂಗಲ್‍ನಲ್ಲಿ ಎದುರಾಗಿತ್ತಾದರೂ ಅದಕ್ಕೆ ಸರಿಯಾದ ವಿವರಣೆಯನ್ನು ಅವರು ನೀಡಿರಲಿಲ್ಲ, ಆದರೆ ಈಗ ಮತ್ತೊಮ್ಮೆ ಅದೇ ರೀತಿಯ ಸಮಸ್ಯೆ ಎದುರಾಗಿದ್ದರಿಂದ ಬಳಕೆದಾರರು ಮತ್ತೊಮ್ಮೆ ಪರದಾಡಬೇಕಾಯಿತು.

Facebook Comments

Sri Raghav

Admin