ರೇಷನ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ- ಗೋದಿ ಜೊತೆ ಸಿಗಲಿದೆ ತಾಳೆಎಣ್ಣೆ, ಉಪ್ಪು, ಸಕ್ಕರೆ, ತೊಗರಿ ಬೇಳೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಆದ್ಯತಾ ಪಡಿತರ ಚೀಟಿದಾರರ ಕುಟುಂಬದ ಪ್ರತಿ ಸದಸ್ಯರಿಗೆ ಈ ವರ್ಷದಿಂದ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ನೀಡುವ ನಿರ್ಧಾರವನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ತಾಳೆ ಎಣ್ಣೆ, ಉಪ್ಪು, ಸಕ್ಕರೆ, ತೊಗರಿ ಬೇಳೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ ಬಳಿಕ ಪರಿಶೀಲನೆ ಮಾಡು ವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2016ರ ಸೆಪ್ಟೆಂಬರ್‍ನಿಂದ 25ರೂ.ಗೆ ಒಂದು ಲೀಟರ್ ತಾಳೆ ಎಣ್ಣೆ, 2016ರ ಅಕ್ಟೋಬರ್‍ನಿಂದ 2ರೂ. ಗೆ ಒಂದು ಕೆಜಿಉಪ್ಪು, 2017ರ ಮಾರ್ಚ್‍ನಿಂದ 15 ರೂ. ಗೆ ಒಂದು ಕೆಜಿ ಸಕ್ಕೆರೆ, 2017 ಏಪ್ರಿಲ್‍ನಿಂದ 38ರೂ.ಗೆ ಒಂದು ಕೆಜಿ ತೊಗರಿ ಬೇಳೆಯನ್ನು ಹಂಚಿಕೆ ಮಾಡಲಾಗುತ್ತಿತ್ತು.

2017ರ ಮೇ 15ರಂದು ಹೊಸ ಆದೇಶ ಹೊರಡಿಸಿ ತಾಳೆ ಎಣ್ಣೆ, ಸಕ್ಕರೆ, ಉಪ್ಪು ವಿತರಿಸುವುದನ್ನು ನಿಲ್ಲಿಸಲಾಗಿದೆ. 2019ರ ಸೆಪ್ಟೆಂಬರ್‍ನಲ್ಲಿ ತೊಗರಿ ಬೇಳೆಯನ್ನು ನಿಲ್ಲಿಸಲಾಗಿದೆ ಎಂದು ವಿವರಿಸಿದರು. ಪೋಷ್ಠಿಕಾಂಶಗಳು ಇರುವ ದವಸ ಧಾನ್ಯ ಹಾಗೂ ದಿನಬಳಕೆ ವಸ್ತುಗಳನ್ನು ರಿಯಾಯ್ತಿ ದರದಲ್ಲಿ ಹಂಚಿಕೆ ಮಾಡುವುದನ್ನು ಮುಂದುವರೆಸಬೇಕೆಂದು ಎ.ಟಿ.ರಾಮಸ್ವಾಮಿ ಒತ್ತಾಯಿಸಿ ದಾಗ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.

Facebook Comments