ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಗೋಪಾಲಯ್ಯಗೆ ಅಭೂತಪೂರ್ವ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.27-ಉಪ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರಿಗೆ ಮತದಾರರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿರುವುದು ಗೆಲುವಿನ ವಾತಾವರಣ ಸೃಷ್ಟಿಸಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನವೇ ಪ್ರಚಾರವನ್ನು ಆರಂಭಿಸಿದ್ದ ಗೋಪಾಲಯ್ಯ ಈಗಾಗಲೇ ಕ್ಷೇತ್ರದಾ ದ್ಯಂತ ಎರಡು ಸುತ್ತು ಮತದಾರರನ್ನು ಮನೆ ಮನೆಗೆ ಭೇಟಿ ನೀಡಿ ಮತ ಯಾಚನೆ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆ ಪರಿಸ್ಥಿತಿಗೆ ಕಾರಣರ್ಯಾರು? ಈ ಉಪಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರಕ್ಕೆ ಮಾಡಬಹುದಾದ ಹೊಸ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ.

ಗೋಪಾಲಯ್ಯನವರ ಅಭಿವೃದ್ಧಿ ಮಂತ್ರಕ್ಕೆ ಮತದಾರರು ಕೂಡ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದು, ಎಲ್ಲಾ ಸಮುದಾಯಗಳಿಂದ ಅವರಿಗೆ ಬೆಂಬಲ ದಿನದಿನಕ್ಕೂ ಹೆಚ್ಚಾಗುತ್ತಿದೆ. ಇಂದು ಮಾರಪ್ಪನ ಪಾಳ್ಯ ವಾರ್ಡ್ ನಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಡಾ.ನಾಗೇಂದ್ರ ಸೇರಿದಂತೆ ಅನೇಕ ಮುಖಂಡರು ಪ್ರಚಾರದಲ್ಲಿ ತೊಡಗಿದ್ದರು.

ಇತ್ತ ವಸತಿ ಸಚಿವ ವಿ.ಸೋಮಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಎಂ.ನಾಗರಾಜ್ ಬಿಬಿಎಂಪಿ ಸದಸ್ಯರು ಸೇರಿ ದಂತೆ ಅನೇಕರು ನಂದಿನಿ ಬಡಾವಣೆ ಯಲ್ಲಿ ಗೋಪಾಲಯ್ಯ ಪರ ಭರ್ಜರಿ ಪ್ರಚಾರ ನಡೆಸಿದರು.

ಇಂದು ಸಂಜೆ ಗೋಪಾಲಯ್ಯ ಪರ ಮತಯಾಚನೆಗೆ ಖುದ್ದು ಮುಖ್ಯಮಂತ್ರಿ ಬಿಎಸ್‍ವೈ ಪ್ರಚಾರಕ್ಕೆ ಆಗಮಿಸುತ್ತಿರುವುದರಿಂದ ಕ್ಷೇತ್ರವು ಕಮಲಮಯವಾಗಿದೆ. ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯ ಎಂಬ ಹಿನ್ನೆಲೆಯಲ್ಲಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮತದಾರರು ತಮ್ಮ ಮನೆಯ ಮಗನ ರೀತಿಯಲ್ಲೇ ನೋಡುತ್ತಿದ್ದಾರೆ. ಈ ಬಾರಿ ಹಿಂದಿನ ಚುನಾವಣೆಗಳಿಗಿಂತಲೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ಸೋಮಣ್ಣ ಭವಿಷ್ಯ ನುಡಿದರು.

Facebook Comments