ಜನರ ತೀರ್ಪು ನನ್ನನ್ನು ಅರ್ಹನನ್ನಾಗಿಸಿದೆ : ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.9- ಅನರ್ಹ, ಅನರ್ಹ ಎಂದು ಹೇಳುತ್ತಿದ್ದವರಿಗೆ ಮತದಾರರು ಅರ್ಹ ಮಾಡಿ ಸರಿಯಾದ ತೀರ್ಪು ಕೊಟ್ಟಿದ್ದಾರೆ ಎಂದು ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಜೆಪಿಯಿಂದ ಜಯಗಳಿಸಿದ ಕೆ.ಗೋಪಾಲಯ್ಯ ಹೇಳಿದರು. ಮೂರು ಬಾರಿ ಕ್ಷೇತ್ರದಲ್ಲಿ ಜಯಗಳಿಸಲು ಮತದಾರರು ಸಹಕರಿಸಿದ್ದಾರೆ. ಕ್ಷೇತ್ರದಲ್ಲಿ ಅನರ್ಹರೆಂದು ಹೇಳುತ್ತಿದ್ದವರಿಗೆ ಈ ಜಯದ ಮೂಲಕ ನಾನು ಮಾಡಿರುವ ಕೆಲಸಗಳು ಏನೆಂಬುದನ್ನು ತಿಳಿಸಿದ್ದಾರೆ ಎಂದು ಹೇಳಿದರು.

ಮತ ಎಣಿಕೆ ಕೇಂದ್ರದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಇನ್ನು ಹೆಚ್ಚಿನ ಕೆಲಸಗಳನ್ನು ಮಾಡಿ ಜನರ ಮನ್ನಣೆ ಗಳಿಸುವುದಾಗಿ ಹೇಳಿದರು.

Facebook Comments

Sri Raghav

Admin