ರಾಜಾನುಕುಂಟೆ ಪೊಲೀಸರಿಂದ ಗೋಪಾಲಕೃಷ್ಣ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಯಲಹಂಕ ಶಾಸಕ ವಿಶ್ವನಾಥ್ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರನ್ನು ಇಂದು ರಾಜಾನುಕುಂಟೆ ಪೋಲಿಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್‍ಪಿ ನಾಗರಾಜ್, ಅವರ ನೇತೃತ್ವದಲ್ಲಿ ವಿಚಾರಣೆ ನಡೆಯಿತು.

ವಿಡಿಯೋ ತುಣುಕುಗಳನ್ನು ಗೋಪಾಲ ಕೃಷ್ಣ ಅವರಿಗೆ ತೋರಿಸಿ ಇದರಲ್ಲಿರುವುದು ನೀವೆ ? ಸಂಭಾಷಣೆ ನಿಮ್ಮದೆ ?ಎಂಬ ಪ್ರಶ್ನೆಗಳನ್ನು ಕೇಳಿ, ವಿಚಾರಣೆ ನಡೆಸಿ, ಉತ್ತರ ಪಡೆದು ಕೊಂಡರು. ನಂತರ, ಮೊದಲೇ ಸಿದ್ಧ ಪಡಿಸಿ ಕೊಂಡಿದ್ದ ಪ್ರಶ್ನೆಗಳನ್ನು ಕೇಳಿ ಪ್ರಕರಣಕ್ಕೆ ಸಂಭಂದಿಸಿದಂತೆ ಪೋಲೀಸರು ಅವರಿಂದ ಉತ್ತರ ಪಡೆದು ಕೊಂಡರು.

ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷರಾದ ಎಸ್.ಆರ್. ವಿಶ್ವನಾಥ್ ಅವರ ಕೊಲೆಗೆ ಸಂಚು ರೂಪಿಸಿದ್ದಾರೆಂಬ ಪ್ರಕರಣಕ್ಕೆ ಸಂಭಂದಿಸಿದಂತೆ ರಾಜಾನುಕುಂಟೆ ಪೋಲೀಸ್ ಠಾಣೆಯಲ್ಲಿ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಳ್ಳ ದೇವರಾಜ್ ಅವರನ್ನು ಬಂಸಿ ವಿಚಾರಣೆ ನಡೆಸಿದ ಪೋಲಿಸರು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು, ನ್ಯಾಯಾಲಯ ಆತನಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

ಗೋಪಾಲ ಕೃಷ್ಣ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಗೋಪಾಲಕೃಷ್ಣ ಅವರಿಗೆ ಪೋಲೀಸರು ನೋಟೀಸ್ ನೀಡಿದ್ದು, ಅದರಂತೆ ಇಂದು ರಾಜಾನುಕಂಟೆ ಪೋಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.

Facebook Comments