ರೈತರು-ಅಕ್ಕಿ ಗಿರಣಿ ಮಾಲೀಕರ ಸಮಸ್ಯೆ ಬಗೆಹರಿಸಲು ಬದ್ಧ : ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ.7- ರೈತರು ಮತ್ತು ಅಕ್ಕಿ ಗಿರಣಿ ಮಾಲೀಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ರೈತರು ಹಾಗೂ ಉದ್ಯಮಿಗಳ ಹಿತ ಕಾಯುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹೇಳಿದರು.

ನಗರದ ಸಪ್ತಗಿರಿ ಆಗ್ರೋ ಇಂಡಸ್ಟ್ರೀಸ್‍ನಲ್ಲಿ ನಡೆದ ಗಿರಣಿ ಮಾಲೀಕರು ಮತ್ತು ರೈತರೊಂದಿಗೆ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿಗಳು ಹಾಗೂ ಮುಖ್ಯಮಂತ್ರಿಗಳು ರೈತರ ಬಗ್ಗೆ ಒಲವು ಹೊಂದಿದ್ದು, ಕೊರೊನಾ ಸಂದರ್ಭದಲ್ಲಿಯೂ ರೈತರ ಹಿತ ಕಾಯುವಲ್ಲಿ ಶ್ರಮಿಸಿದ ಯಡಿಯೂರಪ್ಪ ಅವರ ಮಾದರಿಯಲ್ಲಿ ನಾವು ಕಾರ್ಯ ನಿರ್ವಹಿಸುವುದಾಗಿ ಹೇಳಿದ ಅವರು, ಉತ್ತರ ಪ್ರದೇಶ ಮತ್ತು ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಉದ್ದಿಮೆಗಳಿಗೆ ನೀಡಿರುವ ಸೌಲಭ್ಯಗಳನ್ನು ರಾಜ್ಯದಲ್ಲಿಯೂ ನೀಡಲು ಶ್ರಮಿಸುವುದಾಗಿ ಹೇಳಿದರು.

ರೈತರು ಮತ್ತು ಆಹಾರಕ್ಕೆ ಸಂಬಂಧಿಸಿದ ಉದ್ದಿಮೆಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಆಹಾರ ಸಚಿವರು, ರೈತರು ಹಾಗೂ ಉದ್ಯಮಿಗಳೊಂದಿಗೆ ಮಾತ ಒನಾಡುವ ಮೂಲಕ ಉದ್ಯೋಗ ಸೃಷ್ಟಿಯೊಂದಿಗೆ ರೈತರಿಗೆ ನೆರವಾಗುವ ಯೋಜನೆ ರೂಪಿಸುತ್ತಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ರಾಜ್ಯದ ಮೂರು-ನಾಲ್ಕು ಜಿಲ್ಲಾಗಳಲ್ಲಿ ಮಾತ್ರ ಸರ್ಕಾರ ಭತ್ತವನ್ನು ಖರೀದಿಸುತ್ತಿದ್ದು, ರೈತರು ಹೆಚ್ಚಿನ ಬೆಳೆಯನ್ನು ಬೆಳೆದಾಗ ಮಾತ್ರ ಇಂತಹ ಸಂಸ್ಥೆಗಳು ಉಳಿದುಕೊಳ್ಳಲಿದ್ದು, ಇಲಾಖೆಯಿಂದ ಆಗುತ್ತಿರುವ ಅಕ್ಕಿಯ ಗುಣಮಟ್ಟ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್, ಸೋಮನಿಂಗಪ್ಪ, ಆಹಾರ- ನಾಗರೀಕ ಪೂರೈಕೆ ಕಾರ್ಯದರ್ಶಿ ಎ.ಎನ್ ಪ್ರಸಾದ್, ಆಯುಕ್ತೆ ಶ್ಯಾಮಲಾ ಇಕ್ಬಾಲ್, ವಿಶ್ವರಾಧ್ಯ, ಪ್ರಸಾದ್, ಶ್ರೀಧರ್ ಬಾಬು ಸೇರಿದಂತೆ ಇತರರಿದ್ದರು.

Facebook Comments