ಮೈಸೂರು ಮೃಗಾಲಯಕ್ಕೆ ಬಂದ ಹೊಸ ಅಥಿತಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.3- ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾದಿಂದ ತಲಾ ಎರಡೆರಡು ಗಂಡು-ಹೆಣ್ಣು ಗೊರಿಲ್ಲಾಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಟಬ್ಬೊ (14 ವರ್ಷ), ಡಂಬೋ (8 ವರ್ಷ) ಹೆಸರಿನ ಗಂಡು ಗೊರಿಲ್ಲಾಗಳು ಜರ್ಮನಿಯಿಂದ ಬಂದಿದ್ದು, ಇವಕ್ಕೆ ವಾಸಿಸಲು ಅನುಕೂಲವಾಗುವಂತಹ ಬಿಡಾರದ ವ್ಯವಸ್ಥೆಯನ್ನು ಇನೋಸಿಸ್ ಮಾಡಿಕೊಟ್ಟಿದೆ.

ಮಲೇಶಿಯಾ, ಸಿಂಗಪೂರ್‍ನಿಂದ ತಲಾ ಎರಡು ಗೋರಿಲ್ಲಾಗಳು ಬಂದಿದ್ದು, ಮಲೇಶಿಯಾದ ಮಾರ್ಲಿನ್ (ಗಂಡು- 16 ವರ್ಷ), ಅಟೀನಾ (ಹೆಣ್ಣು- 12 ವರ್ಷ), ಸಿಂಗಪೂರ್‍ನ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಮೈಸೂರು ಮೃಗಾಲಯದಲ್ಲಿವೆ.

ಕೋವಿಡ್ ಮುಂಜಾಗ್ರತೆ ದೃಷ್ಟಿಯಿಂದ ಅವುಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‍ನಲ್ಲಿಡಲಾಗಿದೆ. ಶೀಘ್ರವೇ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಲಾಗುತ್ತದೆ ಎಂದು ಮೃಗಾಲಯ ಪ್ರಾಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

Facebook Comments