ಪೊಲೀಸರಿಗೆ ದೆವ್ವದ ಕಾಟ, ಆತ್ಮಗಳು ಸಂಚರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ..! (Video)

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮಾ.17-ನಂಬಿದರೆ ನಂಬಿ ಬಿಟ್ಟರೆ ಬಿಡಿ ಇದು ಸತ್ಯ ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ನಡೆದ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು. ಏನಪ್ಪಾ ಇದು ಅಂತೀರಾ ಪೊಲೀಸ್ ಠಾಣೆಯಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುವಾಗ ಪೊಲೀಸರ ಕಣ್ಣಿಗೆ ಬಿದ್ದ ಈ ದೃಶ್ಯ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ.

ದೇಶ ವಿದೇಶಗಳಲ್ಲಿ ಹಾಗೂ ಅಂತರ್ಜಾಲಗಳಲ್ಲಿ ಹಲವು ವಿಸ್ಮಯಗಳ ನಡುವೆ ಪ್ರೇತಾತ್ಮಗಳು, ಭೂತ, ದೆವ್ವ ಎಂಬ ವಿಷಯಗಳನ್ನು ನೋಡುತ್ತೇವೆ. ಇತ್ತೀಚಿನ ಧಾರವಾಹಿ, ಸಿನಿಮಾಗಳಲ್ಲಿಯೂ ಕೂಡ ಇಂತಹ ಹಲವಾರು ಸನ್ನಿವೇಶಗಳು ಸೃಷ್ಟಿಯಾಗುತ್ತಿರುವುದು ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ . ಆದರೆ ಜಿಲ್ಲೆಯ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಈ ದೃಶ್ಯ ನಿಜಕ್ಕೂ ಆತಂಕ ಉಂಟು ಮಾಡುತ್ತದೆ.

ಸಿಸಿಟಿವಿ ಫುಟೇಜ್‍ನಲ್ಲಿ ದಾಖಲಾಗಿರುವ ಈ ದೃಶ್ಯ ನೋಡಿದರೆ ನಿಜಕ್ಕೂ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಎದೆ ಝಲ್ಲೆನ್ನುತ್ತದೆ. ಆತ್ಮಗಳ ಸಂಚಲನವನ್ನು ಕಣ್ಣಾರೆ ನೋಡಿದ ಪೊಲೀಸರ ಬಗ್ಗೆ ಪೂರ್ಣ ವಿವರ ಇಲ್ಲಿದೆ ನೋಡಿ. ರಾತ್ರಿಯಾದರೆ ಸಾಕು ಪೊಲೀಸ್ ಠಾಣೆಗಳಿಗೆ ಆಗಮಿಸುತ್ತವೆ ಆತ್ಮಗಳು. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದರೂ ಸಿಸಿಟಿವಿ ಫುಟೇಜ್ ಮಾತ್ರ ಸಾಕ್ಷೀಕರಿಸುತ್ತಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಇಂತಹ ವಿಚಿತ್ರ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು ಈಗ ಅದು ಬಹಿರಂಗಗೊಂಡಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಮುಂಭಾಗ ಬಾಗಿಲು ಬಳಿ ಬಂದು ಹೋಗುತ್ತಿರುವ ಆತ್ಮಗಳು ಎಲ್ಲರ ನಿದ್ದೆ ಗೆಡಿಸಿವೆ.

ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಪಕ್ಕದಲ್ಲೇ ಇರುವ ಪೊಲೀಸ್ ಠಾಣೆಯ ಸಿಸಿ ಟಿವಿಯಲ್ಲಿ ಸೆರೆಯಾಗಿರೋ ಆತ್ಮಗಳ ದೃಶ್ಯ ವೈರಲ್ ಆಗಿದ್ದು ಈಗ ಅಧಿಕಾರಿಗಳಿಗೆ ಈ ವಿಚಾರವನ್ನು ಹೇಳುವುದಕ್ಕೆ ಆಗುತ್ತಿಲ್ಲ, ಬಿಡುವುದಕ್ಕೂ ಆಗುತ್ತಿಲ್ಲ.

ಐದಾರು ವರ್ಷಗಳ ಹಿಂದೆ ಇದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪ್ರಶಾಂತ್ ಎಂಬ ಸಬ್‍ಇನ್ಸ್‍ಪೆಕ್ಟರ್ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಸಾವುಗಳ ಸಂಖ್ಯೆ ಮಿತಿ ಮೀರುತ್ತಿದೆ. ಹಾಗಾಗಿ ರಸ್ತೆಯಲ್ಲಿ ಶಾಂತಿ ಮೂಡಿಸಲಿ ಎಂಬ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂಭಾಗ ಪೂಜೆ ನೆರವೇರಿಸಿದರು.

ಅಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕಾರ್ತಿಕ್ ರೆಡ್ಡಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸ್ ಠಾಣೆಯಲ್ಲಿ ಪೂಜೆ ನೆರವೇರಿಸಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ನಂತರದ ದಿನಗಳಲ್ಲಿ ಗಣನೀಯವಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿತ್ತು. ಇದು ಕಾಕತಾಳೀಯವೂ ಆಗಿರಬಹುದು.

ಇದೆಲ್ಲದರ ನಡುವೆ ಈಗ ಆತ್ಮಗಳು ಠಾಣೆಯಲ್ಲಿ ಓಡಾಡುತ್ತಿವೆ ಎಂಬ ವಿಚಾರ ಜಿಲ್ಲೆಯಾದ್ಯಂತ ಹರಡಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ರಾತ್ರಿ ವೇಳೆ ಪೊಲೀಸ್ ಠಾಣೆಯ ಮುಂಭಾಗ ಆತ್ಮಗಳು ಸಂಚರಿಸುತ್ತಿವೆ ಎಂಬ ವಿಚಾರ ಸಿಸಿಟಿವಿ ಫುಟೇಜ್‍ನಲ್ಲಿ ಕಂಡು ಬಂದಿರುವುದರಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದೊಂದು ವಾಹನದ ಲೈಟ್ ಬೆಳಕಾಗಿದೆ. ಇದಕ್ಕೆ ಮಹತ್ವ ನೀಡುವುದು ಬೇಡ, ದಯವಿಟ್ಟು ಸಹಕರಿಸಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಕರ್ತವ್ಯ ಹಾಜರಾಗಲು ಹಿಂಜರಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದೆ. ನಂತರ ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ನೀಡಬೇಕಾಗಿದೆ.

ಒಟ್ಟಾರೆ ಶಿರಾ ಗ್ರಾಮಾಂತರದ ಡಿವೈಎಸ್ಪಿ ವೆಂಕಟೇಶ್ ಹಾಗೂ ನಿರೀಕ್ಷಕರ ಶಿವಕುಮಾರ್ ಇಲ್ಲಿನ ಸಬ್‍ಇನ್ಸ್‍ಪೆಕ್ಟರ್ ಮುತ್ತುರಾಜ್ ಸೇರಿದಂತೆ ಇಲ್ಲಿನ ಸಿಬ್ಬಂದಿಗಳಿಗೆ ಮನವೊಲಿಸಿ ಕೆಲಸ ನಿರ್ವಹಿಸಬೇಕಾಗಿದೆ.

Facebook Comments

Sri Raghav

Admin