ಸದ್ಯಕ್ಕೆ ಮಾಸ್ಕೇ ಮದ್ದು : ಗೌರವ್ ಗುಪ್ತಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 4- ನಗರದಲ್ಲಿ ಡಬಲ್ ಮ್ಯೂಟೆಂಟ್ ಕೊರೊನಾ ರೂಪಾಂತರಿ ವೈರಾಣುವನ್ನು ನಾಶಪಡಿಸುವ ಬಗ್ಗೆ ತಜ್ಞರು ಕಾರ್ಯತತ್ಪರರಾಗಿದ್ದಾರೆ. ಆದರೆ, ಯಾವುದೆ ಸೋಂಕಿಗೂ ಮಾಸ್ಕ್ ಮಾತ್ರ ರಕ್ಷಾ ಕವಚ. ಹೀಗಾಗಿ ಪ್ರತಿಯೊಬ್ಬರೂ ತಪ್ಪದೆ ಮಾಸ್ಕ್ ಧರಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬರೂ ಎಲ್ಲಾ ಸಂದರ್ಭದಲ್ಲೂ ಮಾಸ್ಕ್ ಧರಿಸಬೇಕು. ಊಟ ಮಾಡುವಾಗ ಪ್ರತ್ಯೇಕವಾಗಿ ಕುಳಿತು ಊಟ ಮಾಡಿದ ತಕ್ಷಣ ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕಿನಿಂದ ಬಚಾವಾಗಬಹುದಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೆಲವು ಸಣ್ಣಪುಟ್ಟ ಆಸ್ಪತ್ರೆಗಳಲ್ಲಿ ಮಾತ್ರ ಆಕ್ಸಿಜನ್ ಕೊರತೆ ಇದೆ. ಹೀಗಾಗಿ ಇಂದಿನಿಂದ ಆಕ್ಸಿಜನ್ ಅವಶ್ಯಕತೆಗೆ ತಕ್ಕಂತೆ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಆಕ್ಸಿಜನ್ ಸರಬರಾಜು ಮಾಡುವ ರಿಫಿಲ್ಲಿಂಗ್ ಕೇಂದ್ರಗಳಲ್ಲಿ ನಮ್ಮ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಹಾಗೂ ಆಸ್ಪತ್ರೆಗಳಲ್ಲಿರುವ ಅಮ್ಲಜನಕ ಲಭ್ಯತೆ ಬಗ್ಗೆ ಇಂದಿನಿಂದಲೇ ಸರ್ವೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮಿಡಿಸಿವಿರ್ ಚುಚ್ಚುಮದ್ದುಗಳ ಸಂಗ್ರಹವಿದೆ. ಖಾಸಗಿ ಆಸ್ಪತ್ರೆಯವರು ವೆಬ್‍ಪೆÇೀರ್ಟಲ್‍ನಲ್ಲಿ ಅವಶ್ಯಕತೆ ಇರುವ ರೆಮಿಡಿಸಿವರ್‍ಗಳ ಬಗ್ಗೆ ಕೋರಿಕೆ ಸಲ್ಲಿಸಬೇಕು. ಅವರಿಗೆ ಅವಶ್ಯವಿರುವ ಚುಚ್ಚುಮದ್ದು ತಲುಪಿಸಲಾಗುವುದು. ಜನ ರೆಮಿಡಿಸಿವರ್ ಪಡೆಯಲು ಕಾಳಸಂತೆ ಮಾರ್ಗ ಅನುಸರಿಸಬಾರದು ಎಂದು ಅವರು ಮನವಿ ಮಾಡಿಕೊಂಡರು.

Facebook Comments

Sri Raghav

Admin