ಬ್ರೇಕಿಂಗ್ ನ್ಯೂಸ್ : ಖಾಸಗಿ ಆಸ್ಪತ್ರೆಗೆಳಲ್ಲಿ ಕೊರೋನಾ ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತೆ..? ಇಲ್ಲಿದೆ ಡೀಟೈಲ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.23- ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುತ್ತಿದ್ದ ಸುಲಿಗೆಯನ್ನು ತಪ್ಪಿಸಲು ಸರ್ಕಾರ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಪ್ರಕಾರವೇ ಶುಲ್ಕವನ್ನು ಪಡೆದುಕೊಳ್ಳಬೇಕು. ಒಂದು ವೇಳೆ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ಸರ್ಕಾರಕ್ಕಿದೆ.

ಇಂದು ರಾಜ್ಯಸರ್ಕಾರ ಹೊರಡಿಸಿರುವ ಅಸೂಚನೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಫಾರಸು ಮಾಡಿದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಈ ಕೆಳಕಂಡ ಶುಲ್ಕವನ್ನು ಪಡೆಯಬೇಕು.

ಜನರಲ್ ವಾರ್ಡ್‍ಗೆ 5200, ಎಚ್‍ಡಿಯುಗೆ 7000, ವೆಂಟಿಲೇಟರ್ ಇಲ್ಲದ ಐಸೊಲೇಷನ್‍ಗೆ 8500, ಐಸೊಲೇಷನ್‍ನಲ್ಲಿ ಐಸಿಯು ಮತ್ತು ವೆಂಟಿಲೇಟರ್‍ಗೆ 10,000ರೂ. ನಿಗದಿಪಡಿಸಿದೆ.

ನೇರವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಂತಹವರಿಗೆ ಜನರಲ್ ವಾರ್ಡ್‍ಗೆ 10,000, ಎಚ್‍ಡಿಯುಗೆ 12,000, ವೆಂಟಿಲೇಟರ್ ಇಲ್ಲದ ಐಸೊಲೇಷನ್‍ಗೆ 15,000, ಐಸೊಲೇಷನ್‍ನಲ್ಲಿ ಐಸಿಯು ಮತ್ತು ವೆಂಟಿಲೇಟರ್‍ಗೆ 25,000ರೂ. ನಿಗದಿಪಡಿಸಿದೆ.

ಟಾಸ್ಕ್‍ ಫೋರ್ಸ್ ಈ ದರವನ್ನು ನಿಗದಿ ಮಾಡಿದ್ದು, ಮಹಾರಾಷ್ಟ್ರ, ಗುಜರಾತ್, ದೆಹಲಿ, ತೆಲಂಗಾಣದಲ್ಲಿರುವಂತೆ ಇಲ್ಲಿಯೂ ಕೂಡ ದರವನ್ನು ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಶೇ.50ರಷ್ಟು ಬೆಡ್‍ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು.

ಉಳಿದಂತೆ ನಗದು ಹಾಗೂ ವಿಮಾ ಯೋಜನೆ ಹೊಂದಿರುವವರು ಜನರಲ್ ವಾರ್ಡ್‍ಗೆ 10,000, ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್‍ಗೆ 12,000, ಐಸಿಯು ವಾರ್ಡ್‍ಗೆ 15,000, ಐಸಿಯು ಮತ್ತು ವೆಂಟಿಲೇಟರ್‍ಗೆ 25,000ರೂ.ದರ ನಿಗದಿ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಹೆಚ್ಚಿನ ದರ ಪಡೆಯಲಾಗುತ್ತದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಕಾರ್ಯಕಾರಿ ನಿರ್ದೇಶಕರ ನೇತೃತ್ವದಲ್ಲಿ ಟಾಸ್ಕ್‍ ಫೋರ್ಸ್ ರಚನೆ ಮಾಡಲಾಗಿತ್ತು.

ಈ ಸಮಿತಿಯು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಅಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲಿ ನಿಗದಿಪಡಿಸಿರುವ ದರವನ್ನು ಅಧ್ಯಯನ ಮಾಡಿತ್ತು. ಕಳೆದ ಗುರುವಾರ ಟಾಸ್ಕ್ ಫೋರ್ಸ್   ಸಮಿತಿ ಮತ್ತು ಐಎಂಎ ಮುಖ್ಯಸ್ಥರ ಜತೆ ಸಭೆ ನಡೆಸಿ ನೂತನ ಪರಿಷ್ಕøತ ದರಕ್ಕೆ ಒಪ್ಪಿಗೆ ಪಡೆಯಲಾಗಿತ್ತು.

ಕೊರೊನಾ ರೋಗಿಗಳಿಗೆ ದೇಶಾದ್ಯಂತ ಒಂದೇ ದರ ನಿಗದಿಪಡಿಸಬೇಕೆಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದ್ದನ್ನು ಸ್ಮರಿಸಬಹುದಾಗಿದೆ.ಷರತ್ತುಗಳೇನು? ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್‍ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು.

ಇನ್ಸೂರೆನ್ಸ್ ಇದ್ದರೆ ಅಂತಹ ರೋಗಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಹೆಲ್ತ್‍ಕಾರ್ಡ್ ಇಲ್ಲದಿದ್ದರೂ ರೋಗಿಗಳು ಚಿಕಿತ್ಸೆ ಪಡೆಯಬಹುದಾಗಿದೆ.ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಯೋಜನೆಯಡಿ ಚಿಕಿತ್ಸೆ ಪಡೆಯುವ ಬಿಪಿಎಲ್ ಕಾರ್ಡ್‍ದಾರರಿಗೆ ಒಂದೇ ದರ. ನಗದು ಪಾವತಿ, ವಿಮೆ ರಹಿತ ಚಿಕಿತ್ಸೆ ಪಡೆಯುವರಿಗೆ ಪ್ರತ್ಯೇಕ ದರ ಆನ್ವಯ.

Facebook Comments

Sri Raghav

Admin