40,000 ಕೋಟಿ ವೆಚ್ಚದಲ್ಲಿ 6 ಸಬ್‍ಮರೀನ್ ನಿರ್ಮಾಣ, ಕ್ಷಿಪಣಿಗಳ ಖರೀದಿಗೆ ಗ್ರೀನ್ ಸಿಗ್ನಲ್..!

ಈ ಸುದ್ದಿಯನ್ನು ಶೇರ್ ಮಾಡಿ

Submarine--01

ನವದೆಹಲಿ, ಫೆ.1-ದೇಶದ ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳ ಸಾಮಥ್ರ್ಯ ಹೆಚ್ಚಿಸಲು ಆರು ಜಲಾಂತರ್ಗಾಮಿಗಳ ನಿರ್ಮಾಣ ಹಾಗೂ ಯುದ್ಧ ಟ್ಯಾಂಕ್‍ಗಳನ್ನು ಧ್ವಂಸ ಮಾಡಬಲ್ಲ ಕ್ಷಿಪಣಿಗಳನ್ನು ಹೊಂದಲು 40,000 ಕೋಟಿ ರೂ.ಗಳ ವೆಚ್ಚದ ಮಹತ್ವಪೂರ್ಣ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.
ರಾಜಧಾನಿ ದೆಹಲಿಯಲ್ಲಿ ನಡೆದ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಂಸ್ಥೆ ರಕ್ಷಣಾ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಯೋಜನೆ ಅನ್ವಯ ಆರು ಸಬ್‍ಮರೀನ್‍ಗಳನ್ನು ದೇಶೀಯವಾಗಿ ನಿರ್ಮಾಣ ಮಾಡಲಾಗುವುದು ಮತ್ತು 5,000 ಮಿಲನ್ 2 ಟಿ ಟ್ಯಾಂಕ್ ಪ್ರತಿರೋಧಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಸೇನಾ ಪಡೆಗಳಿಗಾಗಿ ಖರೀದಿಸಲಾಗುತ್ತದೆ.
ಅಣ್ವಸ್ತ್ರ ಸಾಮಥ್ರ್ಯದ ಎಎನ್‍ಎಸ್ ಹರಿಹಂತ್ ಜಲಾಂತರ್ಗಾಮಿಗಾಗಿ ಟಾರ್ಪಿಡೋಗಳನ್ನು (ಅತ್ಯಾಧುನಿಕ ಪ್ರಬಲ ಸಿಡಿ ತಲೆ ಕ್ಷಿಪಣಿ) ಹೊಂದಲು ರಕ್ಷಣಾ ಸಚಿವಾಲಯ ಸಿದ್ದತೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಅನುಮೋದನೆ ದೊರೆತಿದೆ.
ಇದಲ್ಲದೇ ಇನ್ನೂ ಆರು ಸ್ಕ್ರಾಪಿನ್ ಸಬ್‍ಮರೀನ್‍ಗಳನ್ನು ನೌಕಾ ಪಡೆಗೆ ಸೇರಿಸಿಕೊಳ್ಳಲು ಸಹ ನಿರ್ಧಾರ ಕೈಗೊಳ್ಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin