ಕಲ್ಲಿದ್ದಲು ಕೊರತೆ, ಬೆಂಗಳೂರಲ್ಲಿ ಲೋಡ್ ಶೆಡ್ಡಿಂಗ್ ಜಾರಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.14- ಕಲ್ಲಿದ್ದಲು ಕೊರತೆ ಆತಂಕದ ನಡುವೆಯೇ ನಗರದ ಕೆಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆಯ ವೇಳೆ ಸುಮಾರು ಒಂದರಿಂದ ಎರಡು ತಾಸು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ಇದಲ್ಲದೆ ರಾತ್ರಿ ವೇಳೆಯೂ ವಿದ್ಯುತ್ ಕೈ ಕೊಡುತ್ತಿದೆ.

ಮಳೆಯ ಆರ್ಭಟದ ನಡುವೆ ಈಗ ವಿದ್ಯುತ್ ಸಮಸ್ಯೆಯೂ ಎದುರಾಗುತ್ತಿದೆ. ಕೆಲವರು ಮಳೆಯ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ಹೇಳುತ್ತಿದ್ದರೂ ಮಳೆ ಇಲ್ಲದಿದ್ದಾಗಲೂ ವಿದ್ಯುತ್ ಕೈ ಕೊಡುತ್ತಿರುವುದು ಹಲವು ಅನುಮಾನ ಮೂಡಿಸಿದೆ.

ಬೆಳಗ್ಗೆ 6 ರಿಂದ 7ರ ನಡುವೆಯೇ ವಿದ್ಯುತ್ ಕೈ ಕೊಡುತ್ತಿದ್ದು, ಒಂದೆಡೆ ಒಂದು ಗಂಟೆಯಾದರೆ ಕೆಲವೆಡೆ ಎರಡು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ.

ಈ ನಡುವೆ ಇಂಧನ ಸಚಿವ ಸುನಿಲ್ ಕುಮಾರ್ , ಬೆಸ್ಕಾಂನ ಸಹಾಯವಾಣಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಸಮಸ್ಯೆಗೆ ಸಂಬಂಸಿದಂತೆ ಗ್ರಾಹಕರಿಂದ ಬರುವ ಕರೆಗಳನ್ನು ಯಾವ ರೀತಿ ಸ್ವೀಕರಿಸಲಾಗುತ್ತಿದೆ ಎಂಬುದನ್ನು ಸಚಿವರು ಖುದ್ದು ಪರಿಶೀಲನೆ ನಡೆಸಿದರು.

Facebook Comments