ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸ ಸಿಗಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ (ಅಸ್ಸಾಂ), ಅ.22- ಜನಸಂಖ್ಯಾ ನಿಯಂತ್ರಣಕ್ಕೆ ಹಲವಾರು ಯೋಜನೆಗಳು ಕೈಗೊಂಡರೂ ಕೂಡ ಜನಸಂಖ್ಯಾಸ್ಫೋಟ ಆಗುತ್ತಿರುವ ಹಿನ್ನೆಲೆಯಲ್ಲಿ ಆಸ್ಸಾಂ ಸರ್ಕಾರ ಮಹತ್ತರ ನಿರ್ಧಾರವೊಂದನ್ನು ಕೈಗೊಂಡಿದೆ.  ಈ ಹಿಂದೆ ಹಲವು ರಾಜ್ಯಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಕೆಲಸಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಂಡಿದ್ದರೂ ಈಗ ಅಸ್ಸಾಂ ಸರ್ಕಾರವು ಕೂಡ ಜನಸಂಖ್ಯಾ ನಿಯಂತ್ರಣಕ್ಕೆ ಅದೇ ನಿರ್ಧಾರವನ್ನು ಕೈಗೊಂಡಿದೆ.

ನಿನ್ನೆ ನಡೆದ ಅಸ್ಸಾಂ ಸರ್ಕಾರದ ಶಾಸಕಾಂಗದ ಸಭೆಯಲ್ಲಿ ಬಗ್ಗೆ ಪ್ರಸ್ತಾಪಿಸಲಾಯಿತು. ಈ ನೀತಿಯು ಜನವರಿ 2021ರಿಂದ ಜಾರಿಗೆ ಬರಲಿದೆ ಎಂಬ ಮಹತ್ತರ ನಿರ್ಣಯವನ್ನು ಕೈಗೊಂಡಿದ್ದಾರೆ. 2017ರಲ್ಲಿ ನಡೆದ ವಿಧಾನಸಭೆ ಸಂದರ್ಭದಲ್ಲೇ ಈ ನೀತಿ ಮಸೂದೆಗೆ ಅಂಗೀಕಾರ ಸಿಕ್ಕಿದ್ದು, ಇದರ ಅನ್ವಯ ಸರ್ಕಾರಿ ಕೆಲಸದಲ್ಲಿರುವವರು ಎರಡು ಮಕ್ಕಳನ್ನು ಮಾತ್ರ ಹೊಂದಿರಬೇಕು, ಈಗಾಗಲೇ ಸರ್ಕಾರಿ ಕೆಲಸ ಪಡೆದಿರುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬಾರದು ಎಂಬ ಅಂಶವನ್ನು ಮಸೂದೆಯಲ್ಲಿ ಅಳವಡಿಸಲಾಗಿತ್ತು.

ಅಸ್ಸಾಂನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಸರ್ಕಾರಿ ಕೆಲಸಕ್ಕೆ ನಿಯೋಜಿಸಿದ ವಯಸ್ಸಿನಲ್ಲೇ ಅರ್ಜಿ ಸಲ್ಲಿಸಿದ್ದರೂ ಕೂಡ ಮದುವೆ ಆದ ನಂತರ ಸರ್ಕಾರದ ಮಸೂದೆಯನ್ನು ಧಿಕ್ಕರಿಸಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದುಕೊಂಡರೆ ಅಂತಹ ಅಭ್ಯರ್ಥಿಗಳ ಹೆಸರನ್ನು ಬ್ಲಾಕ್‍ಲಿಸ್ಟ್‍ಗೆ ಸೇರಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಭಾರತದಲ್ಲಿ ಮದುವೆಗೆ ಗಂಡಿಗೆ 21 ವರ್ಷ ಹಾಗೂ ಹೆಣ್ಣಿಗೆ 18 ವರ್ಷವಾಗಿರಬೇಕು ಅದನ್ನು ಬಿಟ್ಟು ಬಾಲ್ಯವಿವಾಹ ಮಾಡಿದರೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಜೊತೆಗೆ ಎರಡು ಮಕ್ಕಳು ಸಾಕು ಎಂಬ ನಿಯಮವನ್ನು ಗಾಳಿಗೆ ತೂರಿರುವವರ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅಸ್ಸಾಂ ರಾಜ್ಯದ ಉದ್ಯೋಗ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯುವ ಫಲಾನುಭವಿಗಳೇ ಅಲ್ಲದೆ, ಚುನಾವಣಾ ಆಯೋಗದಡಿ ಕೆಲಸ ನಿರ್ವಹಿಸುವ ಪಂಚಾಯತ್, ಪುರಸಭೆ ಮತ್ತು ಸ್ವಾಯತ್ತ ಕೌನ್ಸಿಲ್‍ಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೂಡ ಎರಡು ಮಕ್ಕಳನ್ನು ಮಾತ್ರ ಹೊಂದಿರಬೇಕು ಎಂಬ ನೀತಿ ಅನ್ವಯವಾಗುತ್ತದೆ, ಒಂದು ವೇಳೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅಂತವರು ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ ಎಂದು ಹಿಮಂತ ಬಿಸ್ವಾ ತಿಳಿಸಿದ್ದಾರೆ.

ಅಸ್ಸಾಂನಲ್ಲಿ 2011ರ ಜನಗಣತಿಯ ಪ್ರಕಾರ 3 ಕೋಟಿ ಜನಸಂಖ್ಯೆಯಿದ್ದು, ಮುಸ್ಲಿಂ ಸಮುದಾಯದವರು ಶೇ. 34.2ರಷ್ಟಿದ್ದರೆ, 10 ವರ್ಷದಲ್ಲಿ ಇವರ ಸಂಖ್ಯೆ ಶೇ. 3.30 ರಷ್ಟು ಏರಿಕೆ ಕಂಡು ಬಂದಿದೆ.

Facebook Comments