1.98 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ವೆಚ್ಚಕ್ಕಾಗಿ ಸಂಸತ್‍ನಲ್ಲಿ ಪ್ರಸ್ತಾಪ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

Piyush-Ghoyal-01ನವದೆಹಲಿ(ಪಿಟಿಐ), ಫೆ.5- ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುವ ಪಸಕ್ತ ಹಣಕಾಸು ವರ್ಷಕ್ಕಾಗಿ 1,98,831.36 ಕೋಟಿ ರೂ.ಗಳ ಒಟ್ಟು ಹೆಚ್ಚುವರಿ ವೆಚ್ಚಕ್ಕಾಗಿ ಕೇಂದ್ರ ಸರ್ಕಾರ ಸಂಸತ್ ಒಪ್ಪಿಗೆ ಕೋರಿದೆ.

ಅನುದಾನಕ್ಕಾಗಿ ಪೂರಕ ಬೇಡಿಕೆಗಳ ತೃತೀಯ ಕಂತನ್ನು ಲೋಕಸಭೆ ಮುಂದೆ ಮಂಡಿಸಿರುವ ಹಣಕಾಸು ಸಚಿವ ಪಿಯೂಷ್ ಗೋಯೆಲ್, ಯೋಜನೆಗಳ ವೆಚ್ಚಕ್ಕಾಗಿ 51,433.28 ಕೋಟಿ ರೂ.ಗಳು ನಿವ್ವಳ ನಗದು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸಚಿವಾಲಯಗಳು ಅಥವಾ ಅಧಿಕ ಸ್ವೀಕೃತಿ ಮೂಲಕ ಉಳಿಕೆಯಿಂದ ಹೆಚ್ಚುವರಿಯಾಗಿ 1,47,396.87 ಕೋಟಿ ರೂ.ಗಳ ಒಟ್ಟು ವೆಚ್ಚದ ಅಗತ್ಯವಿದೆ. ಇದಕ್ಕಾಗಿ ಸಂಸತ್ ಸಮ್ಮತಿ ನೀಡಬೇಕೆಂದು ಅವರು ಕೋರಿದ್ದಾರೆ.

ಕೃಷಿ (19,481 ಕೋಟಿ ರೂ.ಗಳು), ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು(4,840.75 ಕೋಟಿ ರೂ.ಗಳು) ಹಾಗೂ ಗೃಹ ಸಚಿವಾಲಯಕ್ಕೆ(4,700 ಕೋಟಿ ರೂ.ಗಳ) ಅಗತ್ಯವಿದೆ ಎಂದು ಗೋಯೆಲ್ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ