ಸಾಮಾಜಿಕ ಜಾಲತಾಣಗಳಲ್ಲೂ ರೈತರ ಧ್ವನಿ #GovernorDontSignKLRA2020 ಟ್ರೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.15- ಭೂ ಸುಧಾರಣಾ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕದಂತೆ ಸಾಮಾಜಿಕ ಜಾಲತಾಣಗಳಲ್ಲೂ ರೈತರು ಈಗ ಧ್ವನಿ ಎತ್ತಿದ್ದಾರೆ. ರಾಜ್ಯಪಾಲರೇ ಭೂ ಸುಧಾರಣಾ ಕಾಯ್ದೆಗೆ ಸಹಿ ಹಾಕದಿರಿ ಎಂದು ಟ್ವಿಟರ್‍ನಲ್ಲಿ ರೈತರು ಆಗ್ರಹಿಸುತ್ತಿದ್ದು, ಇದಕ್ಕೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗುತ್ತಿದೆ.

ಐಕ್ಯ ಹೋರಾಟ ಸಮಿತಿ ಮತ್ತು ನಮ್ಮೂರ ಭೂಮಿ ನಮಗಿರಳ್ಳಿಯ ಸದಸ್ಯ ನವೀನ್.ಎಸ್ ಮಾತನಾಡಿ, ರೈತರು ಹಾಗೂ ಭೂ ಸುಧಾರಣ ಕಾಯ್ದೆ ವಿರುದ್ಧ ಇರುವವರಿಗಾಗಿ ಈ ಅಭಿಯಾನ ಆರಂಭಿಸಲಾಗಿದೆ. ರೈತರ ಈ ಹೋರಾಟಕ್ಕೆ 2,571 ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ಟ್ವಿಟರ್ ನಲ್ಲಿ ಇದೀಗ governor dont sign klra2020 ಟ್ರೆಂಡ್ ಆಗಿದೆ.

ಅಭಿಯಾನದಲ್ಲಿ ಭಾಗಿಯಾದ ಜನರು ರಾಜ್ಯ ಸರ್ಕಾರಕ್ಕೆ ಕಾನೂನು ಜಾರಿಗೆ ತರದಂತೆ ಆಗ್ರಹಿಸುತ್ತಿದ್ದಾರೆ. ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020 ಕಠಿಣವಾಗಿದ್ದು, ಕಾಯ್ದೆ ಜಾರಿಗೆಯಾಗಿದ್ದೇ ಆದರೆ, ಅದು ಕರ್ನಾಟಕದ ರೈತರಿಗೆ ಮರಣದಂಡನೆ ನೀಡಿದಂತಾಗಲಿದೆ.

ಈ ಮೂಲಕ ಕಾಪೆರ್ರೇಟ್‍ಗಳು ಕೃಷಿ ಭೂಮಿಯನ್ನು ಒಟ್ಟುಗೂಡಿಸಿಕೊಂಡು, ಅವುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದ್ದರಿಂದ, ಗೌರವಾನ್ವಿತ ರಾಜ್ಯಪಾಲರು ಕಾಯ್ದೆ ಜಾರಿಗೊಳಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗುತ್ತಿದೆ. ಕೃಷಿ ಕೇವಲ ಬೆಳೆ ಅಲ್ಲ, ಇದು ಭಾರತದ ಪರಂಪರೆ ಮತ್ತು ಭವಿಷ್ಯ ಎಂದು ಹರ್ಷಿತಾ ಗೌಡ ಅವರು ಹೇಳಿಕೊಂಡಿದ್ದಾರೆ.

Facebook Comments