ಹಾಕಿ ತಂಡಕ್ಕೆ ಆತ್ಮಸ್ಥೈರ್ಯ ತುಂಬಿದ ರಾಜ್ಯಪಾಲರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4-  ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್  ಕ್ರೀಡಾಕೂಟದಲ್ಲಿ ಸೆಮಿಫೈನಲ್‍ವರೆಗೆ ಮುನ್ನುಗ್ಗಿ, ಫೈನಲ್ ಪ್ರವೇಶಿಸಲು ಹಿನ್ನೆಡೆ ಅನುಭವಿಸಿದ ಭಾರತ ಪುರುಷ ಹಾಕಿ ತಂಡಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆತ್ಮ ಸ್ಥೈರ್ಯ ತುಂಬಿದ್ದಾರೆ. ನಿನ್ನೆ ನಡೆದ ಭಾರತ-ಬೆಲ್ಜಿಯಂ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡಕ್ಕೆ 2-5 ಗೋಲುಗಳ ಅಂತರದಲ್ಲಿ ಸೋಲು ಉಂಟಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಟೋಕಿಯೋ ಒಲಿಂಪಿಕ್  ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡವು ಕೆಚ್ಚೆದೆಯ ಪ್ರದರ್ಶನ ನೀಡಿರುವುದಕ್ಕೆ ಅಭಿನಂದಿಸುವೆ. ಗೆಲುವಿಗಾಗಿನ ಯತ್ನದಲ್ಲಿ ಸೋತರೆ ಅದು ಸೋಲಾಗದು. ಮರಳಿ ಯತ್ನವ ಮಾಡು ಎಂಬ ತತ್ವವನ್ನು ಭಾರತೀಯ ಹಾಕಿ ತಂಡ ಮೈಗೂಡಿಸಿಕೊಳ್ಳಲಿ ಎಂದು ಭಾರತೀಯ ಹಾಕಿ ತಂಡಕ್ಕೆ ಧೈರ್ಯ ತುಂಬಿದ್ದಾರೆ.

Facebook Comments