ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳಾಗಿ ಬದಲಾಗಲಿವೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ 32 ಟೋಲ್‍ಗೇಟ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15- ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ 32 ಟೋಲ್‍ಗೇಟ್‍ಗಳನ್ನುಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನಾಗಿ ಪರಿವರ್ತಿ ಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ ಪಾಲುದಾರಿಕೆಯಲ್ಲಿ ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನು ನಿರ್ಮಿಸಲಾಗುತ್ತಿದೆ.ಇದರಿಂದ ಏಕರೂಪ ದರ ವಿಧಿಸಲು ಸಾಧ್ಯವಾಗುತ್ತದೆ. ಕೇಂದ್ರದ ಶೇ.50ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಅನುದಾನವನ್ನುಬಳಸಲಿದೆ.

ಕೇಂದ್ರ ಸರ್ಕಾರ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‍ಗಳಲ್ಲಿ ಎಲೆಕ್ಟ್ರಾನಿಕ್ ಟೋಲ್‍ಗಳನ್ನಾಗಿ ಪರಿವರ್ತಿಸುತ್ತಿದೆ. ಈ ರೀತಿ ಮಾಡುವುದರಿಂದ ಸೋರಿಕೆ ತಡೆಗಟ್ಟುವುದರ ಜೊತೆಗೆ ನಕಲಿ ವಾಹನಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ ಎಂದರು.

500 ಕೋಟಿ ರೂ.ಬಿಡುಗಡೆ: ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 200 ಕಿ.ಮೀನಷ್ಟು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ರಸ್ತೆಗಳು ಹಾಳಾಗಿದ್ದು ಸರಿಪಡಿಸಲು 7,900 ಕೋಟಿ ರೂ. ಬೇಕಾಗುತ್ತದೆ. ತಕ್ಷಣಕ್ಕೆ ರಸ್ತೆ ಸೇತುವೆ ನಿರ್ಮಾಣಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಪ್ರಮಾಣದ ಹಣ ಬೇಕಾಗಿರುವುದರಿಂದ ಹಣ ಹೊಂದಾಣಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಯೋಜಿಸುತ್ತಿದೆ. ಎಂದರು.

Facebook Comments