Wednesday, April 24, 2024
Homeರಾಜಕೀಯಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ : ಕಾರಜೋಳ

ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ : ಕಾರಜೋಳ

ಹುಬ್ಬಳ್ಳಿ, ನ.5- ಮನೆಯಿಂದ ಹಣ ಖರ್ಚು ಮಾಡಿ ಚುನಾವಣೆ ಮಾಡುವ ಒಂದು ಕಾಲವಿತ್ತು. ಆದರೆ, ಇದೀಗ ಕಾಂಗ್ರೆಸ್‍ನವರು ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಭರವಸೆ ಕೊಟ್ಟು ಅವುಗಳನ್ನು ಪಕ್ಷದ ಹಣದಿಂದ ಕೊಡದೆ ಸರ್ಕಾರದ ಖಜಾನೆಯಿಂದ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸ್ವಂತ ಹಣದಿಂದ ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ. ಸರ್ಕಾರದ ಖಜಾನೆಯಲ್ಲಿನ ಹಣವನ್ನು ಖರ್ಚು ಮಾಡಿ ಮೋಸ ಮಾಡಿ ಅಧಿಕಾರಕ್ಕೆ ಬಂದರು.

ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಹಿಂಗಾರು, ಮುಂಗಾರು ಕೈಕೊಟ್ಟಿದೆ. ಧಾರವಾಡ ಜಿಲ್ಲೆಯಲ್ಲಿಯೇ 2 ಲಕ್ಷ 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಬೆಂಗಳೂರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಭೀಕರ ಹತ್ಯೆ

ರೈತರು ಬೋರವೇಲïಗಳನ್ನು ಉಪಯೋಗಿಸಲು ಸರಿಯಾಗಿ ವಿದ್ಯುತ್ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ರೈತರಿಗೆ 2 ತಾಸು ವಿದ್ಯುತ್ ಕೊಡುತ್ತೇನೆ ಎಂದು ಹೇಳುತ್ತಾರೆ. ಆದರೆ ಎರಡು ತಾಸು ಸಹ ಸರಿಯಾಗಿ ವಿದ್ಯುತ್ ನೀಡಲಾಗುತ್ತಿಲ್ಲ. ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಪ್ರತಿ ವರ್ಷ ವಿದ್ಯುತ್ ಮಾರಾಟ ಮಾಡಿ 2-3 ಸಾವಿರ ಕೋಟಿ ಹಣವನ್ನು ಸರ್ಕಾರದ ಖಜÁನೆಗೆ ಕೊಟ್ಟಿದ್ದೇವೆ.ಆದರೆ ಕಾಂಗ್ರೆಸ್‍ನವರು ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ತಿರುಗಾಡಿದರೇ ಹೊರತು ಮಳೆಯಿಲ್ಲ ವಿದ್ಯುತ್ ಸಮಸ್ಯೆ ಆಗುತ್ತದೆ ಎನ್ನುವ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ.

ಈ ಸರ್ಕಾರಕ್ಕೆ ಯಾವುದೇ ರೀತಿಯ ಮುಂದಾಲೋಚನೆಯಿಲ್ಲ. ಕಲ್ಲಿದ್ದಲನ್ನು ಮೊದಲೇ ಖರೀದಿ ಮಾಡಿ ಶೇಖರಿಸಿ ಇಟ್ಟಿದ್ದರೆ ನಮಗೆ ಯಾವುದೇ ವಿದ್ಯುತ್ ಸಮಸ್ಯೆ ಆಗುತ್ತಿರಲಿಲ್ಲ. ಸಿದ್ದರಾಮಯ್ಯ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಕೆಲಸ ಮಾಡುತ್ತಾರೆ. ಇದೀಗ ಕಲ್ಲಿದ್ದಲು ಖರೀದಿ ಮಾಡಲು ಹೋದರೆ ಆಗುವುದಿಲ್ಲ. ರಾಜ್ಯದಲ್ಲಿ ವಿದ್ಯುತ್ ಅಭಾವಕ್ಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣ.ಆದರೆ ಪ್ರತಿಯೊಂದು ವಿಚಾರದಲ್ಲಿಯೂ ಕಾಂಗ್ರೆಸ್‍ನವರು ನರೇಂದ್ರ ಮೋದಿ ಅವರ ಕಡೆಗೆ ಬೊಟ್ಟು ಮಾಡುವುದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ.

ಇವತ್ತು ಜಿಲ್ಲೆಯ ನಾಲ್ಕು ತಾಲೂಕಿನ ಜನರು ಗುಳೆ ಹೊರಟ್ಟಿದ್ದಾರೆ. ರೈತರು ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಮೇವು ಸಿಗುತ್ತಿಲ್ಲ, ರೈತರಿಗೆ ಮೇವು ಬ್ಯಾಂಕ್ ಮಾಡಿ, ಮೇವು ಪೂರೈಸುವ ಕೆಲಸ ಸರ್ಕಾರ ಮಾಡಬೇಕಿತ್ತು, ಆದರೆ ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆಯಾಗಿದೆ, ಅದನ್ನು ನಿವಾರಿಸುವ ಕೆಲಸವನ್ನೂ ಸರ್ಕಾರ ಮಾಡಿಲ್ಲ ಎಂದು ಹರಿಹಾಯ್ದರು.

RELATED ARTICLES

Latest News