ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಮುಧೋಳ, ನ.೪-ನೆರೆ ಸಂತ್ರಸ್ತರ ಆಕ್ರೋಶ ಹೆಚ್ಚಾಗಿದೆ. ಸಂತ್ರಸ್ತರ ನೆರವಿಗೆ ಬಾರದ ಗೋಳು ಕೇಳದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿರುದ್ಧ ಸಂತ್ರಸ್ತರು ತಮ್ಮ ಆಕ್ರೋಶ ತೀವ್ರಗೊಳಿಸಿದ್ದಾರೆ. ಪ್ರವಾಹ ಸಂಭವಿಸಿ ನಾವು ಬೀದಿಗೆ ಬಿದ್ದಿದ್ದೇವೆ.

ನಮ್ಮನ್ನು ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ನಮಗೆ ಗತಿ ಯಾರು? ನಮ್ಮ ಕ್ಷೇತ್ರದವರು ಉಪಮುಖ್ಯಮಂತ್ರಿಯಾಗಿದ್ದಾರೆ. ನಮಗೆ ಪರಿಹಾರ ಕೊಡಲು ವಿಳಂಬವಾಗುತ್ತಿದೆ ಎಂದು ಸಂತ್ರಸ್ತರು ಆರೋಪ ಮಾಡುತ್ತಿದ್ದಾರೆ.

ಕ್ಷೇತ್ರದ ಶಾಸಕರು ಉಪಮುಖ್ಯಮಂತ್ರಿಗಳೂ ಆದ ಕಾರಜೋಳ ಅವರು ನಮ್ಮ ಗೋಳನ್ನು ಕೇಳುತ್ತಿಲ್ಲ. ಅಧಿಕಾರಿಗಳು ಪರಿಹಾರ ನೀಡಲು ಹತ್ತು-ಹಲವು ಷರತ್ತುಗಳನ್ನು ಹಾಕುತ್ತಿದ್ದಾರೆ. ಯಾರ ಬಳಿ ನಮ್ಮ ಗೋಳನ್ನು ಹೇಳಿಕೊಳ್ಳಬೇಕು ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಮೊದಲ ಬಾರಿ ಪ್ರವಾಹ ಸಂಭವಿಸಿದಾಗ ಹಲವಾರು ಮನೆಗಳು ಕುಸಿದು ಜಮೀನಿನಲ್ಲಿದ್ದ ಬೆಳೆಗಳು ನಾಶವಾಯಿತು.

ಮತ್ತೆ ಪ್ರವಾಹ ಸಂಭವಿಸಿ ನಮಗೆ ಅಪಾರ ನಷ್ಟ ಉಂಟಾದರೂ ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಹಲವರು ತಮ್ಮ ಸಂಕಟ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಚಿವರು ನಮ್ಮ ನೆರವಿಗೆ ಧಾವಿಸಬೇಕು. ನಮಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Facebook Comments