BREAKING : ಗಣೇಶೋತ್ಸವಕ್ಕೆ ಸರ್ಕಾರ ಅಸ್ತು, ಷರತ್ತುಗಳು ಅನ್ವಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ವಿಸಿ ಗಣಪತಿ ಹಬ್ಬ ಆಚರಣೆಗೆ ಅನುಮತಿ ನೀಡಲು ಸಮ್ಮತಿಸಿದೆ. ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಗೃಹ ಕಚೇರಿ ಕೃಷ್ಣದಲ್ಲಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಸಚಿವರ ಜೊತೆ ಸಭೆ ನಡೆಸಿ ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಅದ್ದೂರಿಯಲ್ಲದ ಆಚರಣೆಗೆ ಅನುಮತಿ ನೀಡಲಿದ್ದಾರೆ ಎನ್ನಲಾಗಿದೆ.

ಕೋವಿಡ್ ಹಿನ್ನೆಲೆ ಅನುಮತಿ ನೀಡಬೇಕೇ? ಬೇಡವೇ? ಎಂಬ ಗೊಂದಲದಲ್ಲಿ ಸರ್ಕಾರ ಇತ್ತು. ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.ಈಗಾಗಲೇ ಗಣೇಶೋತ್ಸವ ಆಚರಣೆಗೆ ಬಿಜೆಪಿ ಮುಖಂಡರೇ ಒತ್ತಾಯಿಸಿದ್ದಾರೆ. ಹೀಗಾಗಿ, ಕೆಲ ನಿರ್ಬಂಧ ವಿಸಿ ಅನುಮತಿ ನೀಡಲೂಬಹುದು ಎನ್ನಲಾಗುತ್ತದೆ.

ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿರುವ ಕಾರಣ ಹಾಗೂ ಸರ್ಕಾರದ ಮೇಲೆ ಹೆಚ್ಚಿನ ಒತ್ತಡವಿರುವ ಕಾರಣ ಕೆಲವೊಂದು ನಿರ್ಬಂಧ ವಿಸಿ, ಸಾರ್ವಜನಿಕ ಹಬ್ಬ ಆಚರಣೆಗೆ ಅನುಮತಿ ನೀಡುವ ಸಾಧ್ಯತೆ ಇದೆ.ಜೊತೆಗೆ ಕಳೆದ ವರ್ಷಕ್ಕಿಂತಲೂ ನಿರ್ಬಂಧಗಳು ಸಡಲಿಕೆಯಾಗುವ ಸಾಧ್ಯತೆ ಇದೆ. ಆದರೆ ದೊಡ್ಡ ಮಟ್ಟದ ಉತ್ಸವಗಳಿಗೆ ಅನುಮತಿ ನೀಡುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಸಾರ್ವಜನಿಕ ಗಣೇಶೋತ್ಸವದ ಬೇಕು-ಬೇಡಗಳ ಬಗ್ಗೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಭಕ್ತಾದಿಗಳು ಹಾಗೂ ತಜ್ಞರ ಸಲಹೆಗಳ ನಡುವೆ ಸಿಲುಕಿತ್ತು.ಗಣೇಶ ಹಬ್ಬವನ್ನ ಸರಳವಾಗಿ ತಮ್ಮ ತಮ್ಮ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಆಚರಿಸಬೇಕು. ಸಾರ್ವಜನಿಕ ಸ್ಥಳ, ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈ ವರ್ಷವೂ ಅವಕಾಶ ಇರುವುದಿಲ್ಲ.

ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೂ ಕಡ್ಡಾಯ ಮಾರ್ಗಸೂಚಿ ಪಾಲನೆ. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜನೆ ಮಾಡುವಾಗ ಯಾವುದೇ ಮೆರವಣಿಗೆಗೆ ಅವಕಾಶ ನಿರ್ಬಂಧ ಹಾಕಲಾಗುತ್ತದೆ.ಪಾರಂಪರಿಕ ಮೂರ್ತಿಗಳನ್ನ ಮನೆಯಲ್ಲಿಯೇ ವಿಸರ್ಜನೆ ಮಾಡಬೇಕು ಅಥವಾ ಸಮೀಪದ ಪಾಲಿಕೆಯ ಜಿಲ್ಲಾಡಳಿತ ಹೊಂಡ ಕಲ್ಯಾಣಿಗಳಲ್ಲಿ ನಿಮಜ್ಜನ ನೆರವೇರಿಸಬೇಕು ಎಂಬ ಷರತ್ತು ಇರಲಿದೆ.

ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಕಡ್ಡಾಯ,ದೇವಸ್ಥಾನಗಳಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ ಕಡ್ಡಾಯ ಮಾಡಲಾಗುತ್ತದೆ.ದೇವಸ್ಥಾನಗಳಲ್ಲಿ ಆರು ಅಡಿಗೊಂದರಂತೆ ಮಾರ್ಕ್ ಮಾಡಬೇಕು. ಭಕ್ತರು ಕಡ್ಡಾಯ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳುವುದು, ಗೌರಿ- ಗಣೇಶ ಹಬ್ಬದ ವೇಳೆ ಹೆಚ್ಚು ಜನದಟ್ಟಣೆಯಾಗದಂತೆ ಕ್ರಮವಹಿಸಬೇಕು ಎಂಬ ಷರತ್ತು ಇರಲಿದೆ ಎಂದು ಗೊತ್ತಾಗಿದೆ.

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೂಡ ಗಣೇಶೋತ್ಸವ ಆಚರಣೆಗೆ ಅನುಮತಿ ಹಾಗೂ ವಾರಾಂತ್ಯದ ಕಫ್ರ್ಯೂ ಹಿಂಪಡೆದುಕೊಳ್ಳುವ ವಿಚಾರವಾಗಿ ಸುದೀರ್ಘವಾದ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.ಸರ್ಕಾರಕ್ಕೆ ಆತಂಕ:ಒಂದು ವೇಳೆ ಗಣಪತಿ ಹಬ್ಬದ ಆಚರಣೆಗೆ ಅನುಮತಿ ನೀಡದಿದ್ದರೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕ ಸರ್ಕಾರಕ್ಕೆ ಎದುರಾಗಿತ್ತು.

ಪ್ರಬಲ ಹಿಂದೂ ಸಂಸ್ಕøತಿ, ಆಚಾರ, ವಿಚಾರಗಳನ್ನು ಪ್ರತಿಪಾದಿಸುವ ಬಿಜೆಪಿ ಗಣಪತಿ ಹಬ್ಬಕ್ಕೆ ಅನುಮತಿ ಕೊಡದಿದ್ದರೆ ಓಟ್ ಬ್ಯಾಂಕ್‍ಗೆ ಭಾರೀ ಹೊಡೆತ ಬೀಳಲಿದೆ ಎಂದು ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಲ್ಲದೆ , ಪಕ್ಷದ ಮುಖಂಡರು ಹಾಗೂ ಸಚಿವರು ಒತ್ತಡ ಹಾಕಿದ್ದರು.

ಜನಾಶೀರ್ವಾದ ಯಾತ್ರೆಗೆ ಅನುಮತಿ ಕೊಟ್ಟಿರುವಾಗ ಗಣಪತಿ ಹಬ್ಬಕ್ಕೆ ಅಡ್ಡಿ ಏಕೆ ಎಂದು ಪಕ್ಷದವರೇ ಕಿಡಿಕಾರಿದ್ದರು. ಅಂತಿಮವಾಗಿ ಎಲ್ಲರ ಒತ್ತಡಕ್ಕೆ ಮಣಿದು ಷರತ್ತು ಬದ್ಧ ಆಚರಣೆಗೆ ಅನುಮತಿ ಕೊಡಲು ಸಮ್ಮತಿಸಲಿದೆ.

# ಆರ್.ಅಶೋಕ್ ಹೇಳಿಕೆ ಹೈಲೈಟ್ಸ್ : 
* ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ.
* ಗರಿಷ್ಟ 5 ದಿನಗಳಲ್ಲಿ ವಿಸರ್ಜನೆ.
*  ನಗರ ಪ್ರದೇಶಗಳಲ್ಲಿ ವಾರ್ಡ್‌ಗೆ ಒಂದು, ಹಳ್ಳಿಗಳಲ್ಲಿ ಸ್ಥಳೀಯ ಆಡಳಿತ ತೀರ್ಮಾನ.
*  ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲ. ಡಿ.ಜೆ.ಇಲ್ಲ.
* ಗಣೇಶೋತ್ಸವಕ್ಕೆ 50X50 ಪೆಂಡಾಲ್.
*  ನಿಗದಿತ ಸದಸ್ಯರ ತಂಡದೊಂದಿಗೆ ಗಣೇಶ  ವಿಸರ್ಜನೆಗೆ ಅವಕಾಶ. ಮೆರವಣಿಗೆ ಇಲ್ಲ, ವಾದ್ಯಗಳು ಇಲ್ಲ
*   ಸಾರ್ವಜನಿಕ ಗಣೇಶೋತ್ಸವದ ಮಾಡುವವರಿಗೆ ಲಸಿಕೆ ಹಾಕಿಸಿಕೊಂಡಿರಬೇಕು. ಸ್ಥಳದಲ್ಲಿಯೇ ಲಸಿಕೆ ಹಾಕಿಸಿಕೊಳ್ಳಲು ಅನುಮತಿ ಮಾಡಿ ಕೊಡಬೇಕು.
* ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು.
* ಶಾಲಾ ಕಾಲೇಜುಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ.
 * ಈ ತಿಂಗಳು ಮತ್ತು ಮುಂದಿನ ತಿಂಗಳು ಎಚ್ಚರಿಕೆಯಿಂದ ಇರಬೇಕು.
Facebook Comments

Sri Raghav

Admin