ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ : ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.8-ಈ ಬಾರಿ ಮಳೆ ಅನಾಹುತ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಭೀತಿ ಇರೋ ಕಡೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು.

ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ. ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಸಹಕಾರ ಸಿಗುತ್ತಿದೆ. ಪ್ರಕೃತಿ ವಿಕೋಪಗಳ ವೇಳೆ ಸಿಗಬೇಕಾದ ಅನುದಾನ ಸಿಗುತ್ತದೆ. ಕೇಂದ್ರ ಪ್ರಕೃತಿ ವಿಕೋಪ ಬಂದಾಗಲೆಲ್ಲ ನೆರವು ಕೊಟ್ಟಿದೆ ಎಂದು ಹೇಳಿದರು.

ಸರ್ಕಾರ ನೆರೆ ನಿರ್ವಹಣೆಯಲ್ಲಿ ವಿಫಲವೆಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಹಿಂದೆ ಕೂಡ ನೆರೆ ಬಂದಿತ್ತು. ಆಗಲೂ ನಮ್ಮ ಸರ್ಕಾರ ಎಲ್ಲ ಪರಿಹಾರ ನೆರವೇರಿಸಿತ್ತು.

ಪ್ರಕೃತಿ ವಿಕೋಪ ಹೇಳಿ ಕೇಳಿ ಬರಲ್ಲ. ಈಗಾಗಲೇ ಕೆಲವು ಕಡೆ ಪ್ರವಾಹ ಬರುತ್ತಿದೆ. ಜನರ ಕಷ್ಟದ ಬಗ್ಗೆ ಅವರು ಸಲಹೆ ಕೊಡಬೇಕು ಎಂದರು.ಸರ್ಕಾರವನ್ನು ಡಮ್ಮಿಮಾಡುವಂತಹ ಪ್ರಯತ್ನ ಅಷ್ಟೇ. ಅದಕ್ಕೆ ಅವರು ಆರೋಪಗಳನ್ನು ಮಾಡುತ್ತಿದ್ದಾರೆ.

ಸಚಿವರು ಜಿಲ್ಲಾಗಳಿಗೆ ಹೋಗ್ತಿಲ್ಲವೆನ್ನುವುದು ಸರಿಯಲ್ಲ. ಜನರ ಮಧ್ಯೆಯೇ ಇದ್ದು ನಮ್ಮ ಸಚಿವರು ಕೆಲಸ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಚರ್ಚೆ ಮಾಡಬೇಕೆಂದರೆ, ಕಾಂಗ್ರೆಸ್ ನಾಯಕರು ಅವೇಶನದಲ್ಲಿ ಚರ್ಚೆ ಮಾಡಲಿ. ಕಾಂಗ್ರೆಸ್ ನಾಯಕರ ವಿರುದ್ಧ ಡಿಸಿಎಂ ಅಶ್ವಥ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನಾತ್ಮಕ ಕ್ರಮ: ಕೋವಿಡ್ ನಿರ್ವಹಣಾ ಕಾರ್ಯಕ್ಕೆ ಬರದೇ ಇರೋ ನೌಕರರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಕೊರೋನಾಗೆ ಭಯ ಪಟ್ಟು ಕೆಲವರು ಬರುತ್ತಿಲ್ಲ. ಅಂಥೋರಿಗೆಲ್ಲ ನೊಟೀಸ್ ಕೊಡಲಾಗಿದೆ.

ನೊಟೀಸ್‍ಗೆ ಏನು ಉತ್ತರ ಕೊಡುತ್ತಾರೆ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಕೊರೋನಾ ನಿರ್ವಹಣೆ ಕರ್ತವ್ಯ ಮಾಡದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತೇವೆ ಎಂದರು.
ಕೊರೋನಾಗೆ ಭಯ ಪಡುವ ಅಗತ್ಯ ಇಲ್ಲ.ವೈರಸ್‍ಗೆ ಆತಂಕ ಬೇಕಾಗಿಲ್ಲ.

ಕೆಲ ಕೊರೋನಾ ವಾರಿಯರ್ಸ್ ಭಯದಿಂದ ಬರುತ್ತಿಲ್ಲ. ಅವರು ಕರ್ತವ್ಯದಿಂದ ದೂರ ಹೋದರೆ ಖಂಡಿತಾ ಕ್ರಮ ತೆಗೆದುಕೊಳ್ಳುತೇವೆ ಎಂದು ಹೇಳಿದರು. ಕನ್ನಡವನ್ನು ಸಧೃಡಗೊಳಿಸಿದವರು ನಿಜಲಿಂಗಪ್ಪ. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರು. ನೀರಾವರಿ, ರಾಜ್ಯದ ಸಮಗ್ರ ಸುಧಾರಣೆಯನ್ನ ಮಾಡಿದವರು.

ಸಂವಿಧಾನ ರಚನಾ ಸಮಿತಿಯಲ್ಲಿಯೂ ಇದ್ದವರು. ಗಾಂೀಜಿಯವರ ಜೊತೆ ಓಡಾಡಿದ್ದವರು. ಅವರ ಪುಣ್ಯತಿಥಿ ಅಂಗವಾಗಿ ಮಾಲಾರ್ಪಣೆ ಮಾಡಿದ್ದೇವೆ ಎಂದರು.

Facebook Comments

Sri Raghav

Admin