ಸೋಷಿಯಲ್ ಮೀಡಿಯಾದಲ್ಲಿ ತಬ್ಲಿಘಿಗಳ ಪರ ಪೋಸ್ಟ್ ಮಾಡಿದ ಐಎಎಸ್ ಅಧಿಕಾರಿ ಮೊಹ್ಸಿನ್ ಗೆ ಶೋಕಾಸ್ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾಗಿರುವ ತಬ್ಲಿಘಿಗಳು ಪ್ಲಾಸ್ಮಾ ದಾನ ಮಾಡುತ್ತಿರುವ ಕುರಿತು ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಈ ಕುರಿತು ವಿವರಣೆ ಕೇಳಿ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಮಹಾಮಾರಿ ವೈರಸ್ ನಿಂದ ಬಳಲುತ್ತಿರುವ ಸೋಂಕಿತರಿಗೆ ತಬ್ಲಿಘಿ ಜಮಾತ್ ಸದಸ್ಯರು ಪ್ಲಾಸ್ಮಾ ದಾನ ಮಾಡುತ್ತಿದ್ದಾರೆಂದು ಮೊಹಮ್ಮದ್ ಮೊಹ್ಸಿನಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದರು.

ಈ ಹಿಂದೆ ದೆಹಲಿಯಲ್ಲಿ ತಬ್ಲಿಘಿ ಘಟನೆ ನಡೆದಿದ್ದ ಸಂದರ್ಭದಲ್ಲಿ ಕೊರೋನಾದಂತಹ ಸಂದರ್ಭದಲ್ಲಿ ಮುಸ್ಲೀಂ ಸುಮುದಾಯದ ಬೇಜವಾಬ್ದಾರಿ ನಡೆಯ ವಿರುದ್ಧ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ, ಈಗ ಅದೇ ತಬ್ಲಿಘಿಗಳು ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ಲಾಸ್ಮಾ ಚಿಕಿತ್ಸೆಗೆ ತಮ್ಮ ರಕ್ತವನ್ನು ನೀಡುತ್ತಿದ್ದಾರೆ.

ಆದರೆ, ಈ ಕುರಿತು ಟ್ವೀಟ್ ಮಾಡಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಿಸಿನ್, ” ತಬ್ಲಿಘಿಗಳು ಹೀರೋಗಳು..ಅವರು ಪ್ಲಾಸ್ಮಾ ಡೊನೇಟ್ ಮಾಡುತ್ತಿದ್ದಾರೆ. ಮೀಡಿಯಾಗಳೇ ಇದನ್ನು ತೋರಿಸಿ” ಎಂದು ಖಾರವಾಗಿ ಟ್ವೀಟ್‌ ಮಾಡಿದ್ದರು.

# ಶೋಕಾಸ್‌ ನೊಟೀಸ್‌ :
ವಿವಾದಿತ ಟ್ವೀಟ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗೆ ಶೋಕಾಸ್ ನೋಟಿಸ್​ ಜಾರಿ ಮಾಡಿದೆ. ಆPಂಖನ ಅಂಡರ್​​ ಸೆಕ್ರೆಟರಿ ಶಾಮ ಹೊಳ್ಳ ಕಳೆದ ಏಪ್ರಿಲ್​​ 30ರಂದೇ ನೋಟಿಸ್ ನೀಡಿದ್ದಾರೆ. ಈ ನೊಟೀಸ್ ನಲ್ಲಿ 1969ರ ಅಖಿಲ ಭಾರತ ಸೇವಾ ನಿಯಮಗಳ ಪ್ರಕಾರ ಏಕೆ ಕ್ರಮಕೈಗೊಳ್ಳಬಾರದು? ಈ ಬಗ್ಗೆ ಕೂಡಲೇ ಉತ್ತರಿಸಿ ಎಂದು ತಾಕೀತು ಮಾಡಲಾಗಿದೆ.

ಮೊಹ್ಮದ್ ಮೊಹಿಸಿನ್ ಹಾಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ- ಲೋಕಸಭೆ ಚುನಾವಣೆ ಸಂದರ್ಭದಲ್ಲೂ ವಿವಾದಕ್ಕೆ ಈಡಾಗಿದ್ದ ಮೊಹ್ಮದ್ ಮೊಹಿಸಿನ್​​​- ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್​​ ತಪಾಸಣೆ ಮಾಡಿ ಸಸ್ಪೆಂಡ್​ ಆಗಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಇವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಮೊಹ್ಸಿನ್ ಯವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Facebook Comments

Sri Raghav

Admin