ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘವನ್ನು ಅಧಿಕೃತವಾಗಿ ಸ್ಥಾಪಿಸಲಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆಗಳ ಕುರಿತು ಧ್ವನಿಗೂಡಿಸಲಾಗುವುದು ಎಂದು ಸಂಘದ ನೂತನ ಅಧ್ಯಕ್ಷ ಎಸ್.ಮಹೇಶ್ ತಿಳಿಸಿದರು.

ನಗರದಲ್ಲಿಂದು ಕೆಜಿ ರಸ್ತೆಯ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಸಂಘವನ್ನು ಇಂದು ಅಧಿಕೃತ ವಾಗಿ ನೋಂದಣಿ ಮಾಡಿ ಕಂದಾಯ ಇಲಾಖೆಯ ಮಾತೃ ಸಂಸ್ಥೆ ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘ ದಿಂದ ಮಾನ್ಯತೆ ನೀಡಿ ಸಂಘದ ಅಡಿಯಲ್ಲಿ ಉಪ ಸಂಸ್ಥೆಯಾಗಿ ಪರಿಗಣಿಸಲಾಗಿದೆ ಎಂದರು.

ಸಂಘವೂ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿ, ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆಗಳನ್ನು ಸರ್ಕಾರಕ್ಕೆ ಇಲಾಖೆಯ ಹಿರಿಯ ಅಧಿಕಾರಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಸರಕಾರಿ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಇಲ್ಲಿಯವರೆಗೂ ಗ್ರಾಮಲೆಕ್ಕಾಧಿಕಾರಿಗಳು ಕೇಂದ್ರ ಸಂಘಟನೆಯ ಭಾಗವಾಗಿದ್ದರೆ ಹೊರತು ಸಂಘಟನೆಯಲ್ಲಿ ಮಾನ್ಯತೆ ಇರಲಿಲ್ಲ. ಈವರೆಗೂ ಗ್ರಾಮಲೆಕ್ಕಿರ ಸಂಘ ನೋಂದಣಿ ಆಗದೆ ಇದ್ದುದರಿಂದ ಮಾತೃ ಸಂಸ್ಥೆಯಿಂದ ಮಾನ್ಯತೆ ನೀಡಲಾಗಿರಲಿಲ್ಲ .

ರಾಜ್ಯಾದ್ಯಂತ ಸಾವಿರಾರು ಜನ ಗ್ರಾಮಲೆಕ್ಕಿರು ಕಂದಾಯ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಬೃಹತ್ ಸಂಘಟನೆಯೊಂದಿಗೆ ಅಕೃತವಾಗಿ ಸೇರ್ಪಡೆ ಆಗುವುದರೊಂದಿಗೆ ಅವರುಗಳು ಈಗ ತಮ್ಮ ಹಕ್ಕುಗಳು ಕುರಿತು ಸಂಘದ ಮೂಲಕ ಸರಕಾರದ ಗಮನ ಸೆಳೆಯಲು ಅನುವಾಗಲಿದೆ ಹಾಗೇ ಮೂಲ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ ಎಂದರು.

ನೂತನ ಸಂಘವನ್ನು ನಗರದ ಕೆ ಜಿ ರಸ್ತೆಯಲ್ಲಿನ ಇಲಾಖೆಯ ಮಾತೃ ಸಂಘದ ಕಚೇರಿಯಾದ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಕಚೇರಿಯಲ್ಲಿ ಅಕೃತವಾಗಿ ನೋಂದಣಿ ಮಾಡಲಾಗಿದೆ. ಈ ಕಚೇರಿಯಲ್ಲಿ ಸಂಘದ ಕಾರ್ಯನಿರ್ವಹಣೆಗೆ ಬೇಕಾಗುವ ಸ್ಥಳ ಮತ್ತು ಪೀಠೋಪಕರಣಗಳನ್ನು ಒದಗಿಸಲಾಗಿದೆ ಎಂದು ನುಡಿದರು.

ಇಲ್ಲಿಯವರೆಗೂ ಇದ್ದ ಗ್ರಾಮ ಲೆಕ್ಕಾಕಾರಿಗಳ ರಾಜ್ಯ ಸಂಘವು 25 ವರ್ಷ ಹಳೆಯ ಸಂಘವಾಗಿದ್ದು 1995 ರಲ್ಲಿ ನೋಂದಣಿಯಾಗಿದ್ದು ಅಂದಿನಿಂದ ಇಂದಿನವರೆಗೂ ಸಹ ಯಾವುದೇ ನವೀಕರಣ ಆಗದೆ ಸಂಘದ ಅಸ್ತಿತ್ವ ಕಳೆದುಹೋಗಿತ್ತು. ಆದ್ದರಿಂದ ಸಂಘವನ್ನು ಹೊಸದಾಗಿ ಇಂದು ಬೆಂಗಳೂರಿನಲ್ಲಿ ನೋಂದಣಿ ಮಾಡಲಾಗಿದೆ ಎಂದು ವಿವರಿಸಿದರು.

ಸಿದ್ದರಾಜು ಡಿ.ಟಿ .ಕೆಂಗೇರಿ, ಕೆಂಪೇಗೌಡ, ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶಿವನಂದನಾಯ್ಕ್, ಉಪಾಧ್ಯಕ್ಷರಾದ ಮಧುಸೂದನ್, ರಮೇಶ್, ಸಂಘಟನಾ ಕಾರ್ಯದರ್ಶಿ ಜಮ್ಮಶಿದ್ ಅಹ್ಮದ್ ಖಾನ್, ಮೋಹನ್ ಸೇರಿದಂತೆ ಪ್ರಮುಖರಿದ್ದರು.

Facebook Comments