ಬಿಬಿಎಂಪಿ ಈಗಬಿಬಿಎಂಪಿ ಈಗ ‘ಗ್ರೇಟರ್ ಬೆಂಗಳೂರು’ : 250 ವಾರ್ಡ್‍ಗಳ ಹೆಚ್ಚಳಕ್ಕೆ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ಬಿಬಿಎಂಪಿ ಈಗ ಗ್ರೇಟರ್ ಬೆಂಗಳೂರಾಗಿ ಪರಿವರ್ತನೆಯಾಗಲಿದೆ. 198 ವಾರ್ಡ್‍ಗಳಿದ್ದ ಬಿಬಿಎಂಪಿ 250 ವಾರ್ಡ್‍ಗಳ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಬಿಬಿಎಂಪಿ ಕಾಯ್ದೆ ಪರಿಶೀಲನಾ ಸಮಿತಿ ಅಧ್ಯಕ್ಷ ರಘು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಗೆ ಹೊಸದಾಗಿ 52 ವಾರ್ಡ್‍ಗಳ ಸೇರ್ಪ ಡೆಗೆ ಶಿಫಾರಸು ಮಾಡಲಾಗಿದ್ದು, 198 ವಾರ್ಡ್‍ನಿಂದ 250 ವಾರ್ಡ್‍ಗಳ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ವಿಧೇಯಕವನ್ನು ಸದನದ ಮುಂದೆ ಇಂದು ಮಂಡಿಸಲಾಗಿದೆ.

250 ವಾರ್ಡ್ ಆದ ಬಳಿಕ ಬಿಬಿಎಂಪಿ ಬದಲಾಗಿ ಗ್ರೇಟರ್ ಬೆಂಗಳೂರು ಆಗಿ ಪರಿವರ್ತನೆಯಾಗಲಿದೆ. ಕೇವಲ ವಾರ್ಡ್ ಹೆಚ್ಚಳ ಮಾತ್ರವಲ್ಲದೆ ಮೇಯರ್ ಅಧಿಕಾರಾವಧಿ ಕೂಡ ಹೆಚ್ಚಳವಾಗಲಿದೆ. ಒಂದು ವರ್ಷವಿದ್ದ ಮೇಯರ್ ಅವಧಿ ಎರಡೂವರೆ ವರ್ಷಕ್ಕೆ ಏರಿಕೆಯಾಗಲಿದೆ. ಅಷ್ಟೇ ಅಲ್ಲದೆ ಆಯುಕ್ತರಿಗಿರುವ ಅಧಿಕಾರವನ್ನು ಜಂಟಿ ಆಯುಕ್ತರಿಗೆ ನೀಡಲು ತೀರ್ಮಾನ ಮಾಡಲಾಗಿದೆ.

12 ಸ್ಥಾಯಿ ಸಮಿತಿಗಳ ಬದಲಾಗಿ 8 ಸ್ಥಾಯಿ ಸಮಿತಿ ಮಾಡಲು ನಿರ್ಧಾರ ಮಾಡಲಾಗಿದೆ. ಯಾವುದೇ ಹೊಸ ಪ್ರದೇಶಗಳನ್ನು ಸೇರಿಸದಂತೆ ಈಗಿರುವ ಬಿಬಿಎಂಪಿ ವಿಸ್ತೀರ್ಣದಲ್ಲೇ ವಾರ್ಡ್‍ಗಳನ್ನು ವಿಂಗಡಣೆ ಮಾಡಲಾಗುವುದು.  ಸದ್ಯ ಈಗಿರುವ ಕೌನ್ಸಿಲ್ ಸಭಾಂಗಣದಲ್ಲೇ ಕೌನ್ಸಿಲ್ ಮುಂದುವರಿಸಲು ಚಿಂತನೆ ನಡೆಸಲಾಗಿದೆ.

ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಯಾವ ಉದ್ದೇಶವೂ ನಮ್ಮ ಮುಂದೆ ಇಲ್ಲ. ಸ್ಥಳೀಯ ಸಂಸ್ಥೆಗಳ ವಿಸ್ತೀರ್ಣದಲ್ಲಿ ಭಾರತದ ಅತಿದೊಡ್ಡ ಸ್ಥಳೀಯ ಸಂಸ್ಥೆಯಾಗಿ ಬಿಬಿಎಂಪಿ ಹೊರಹೊಮ್ಮಲಿದೆ ಎಂದು ರಘು ಹೇಳಿದ್ದಾರೆ.

Facebook Comments