ಬ್ರೇಕಿಂಗ್ : ಭಾರತೀಯರಿಗೆ ಅಮೆರಿಕದಿಂದ ಬಂತೊಂದು ಸಿಹಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 16-ಅಮೆರಿಕಕ್ಕೆ ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ವಲಸೆ ಬರುವ ಭಾರತೀಯರೂ ಸೇರಿದಂತೆ ವಿದೇಶಿಯರಿಗೆ ಅರ್ಹತೆ ಆಧಾರಿತ ಹೊಸ ಪದ್ದತಿಯನ್ನು ಘೋಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಜ್ಜಾಗಿದ್ದಾರೆ.

ದೇಶದ ವಲಸೆ ನೀತಿಯಲ್ಲಿ ಸಮಗ್ರ ಬದಲಾವಣೆಗಳನ್ನು ತರಲು ಹೊಸ ಪದ್ಧತಿಯಲ್ಲಿ ಪ್ರಸ್ತಾಪಿಸಲಾಗಿದೆ. ಈಗ ಇರುವ ಕುಟುಂಬ ಸಂಪರ್ಕ ಆದ್ಯತೆ ಬದಲಿಗೆ ಅರ್ಹತೆ ಆಧಾರದ ಮೇಲೆ ವಲಸಿಗರಿಗೆ ಆದ್ಯತೆ ನೀಡಲು ಟ್ರಂಪ್ ಉದ್ದೇಶಿಸಿದ್ದಾರೆ.

ಇದರಿಂದ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿರುವ ಸಹಸ್ರಾರು ಭಾರತೀಯರಿಗೆ ಈ ಹೊಸ ನೀತಿಯಿಂದ ಅನುಕೂಲವಾಗಲಿದೆ. ಹೊಸ ಸಮಗ್ರ ವಲಸೆ ನೀತಿಯು ಟ್ರಂಪ್ ಅವರ ಅಳಿಯ ಜರ್ರೆಡ್ ಕುಶ್ನೆರ್ ಅವರ ಕನಸಿನ ಕೂಸು.

ಈ ಹೊಸ ಯೋಜನೆಯು ಗಡಿ ಭದ್ರತೆಯನ್ನು ಹೆಚ್ಚಿಸುವ ಹಾಗೂ ಗ್ರೀನ್ ಕಾರ್ಡ್ ಅಥವಾ ಅಧಿಕೃತ ಶಾಶ್ವತ ಪೌರತ್ವ ವ್ಯವಸ್ಥೆಯನ್ನು ಪುನ:ಶ್ಚೇತನಗೊಳಿಸುವ ಉದ್ದೇಶ ಹೊಂದಿದೆ.

ಅರ್ಹತೆ, ಉನ್ನತ ಶಿಕ್ಷಣ ಪದವಿ ಮತ್ತು ವೃತ್ತಿಪರ ವಿದ್ಯಾರ್ಹತೆಗಳನ್ನು ಹೊಂದಿರುವ ವಿದೇಶಿಯರು ಈ ಹೊಸ ಯೋಜನೆ ಅಡಿ ಸುಲಭವಾಗಿ ವಲಸೆ ಹೋಗಲು ಅನುವು ಮಾಡಿಕೊಡಲಿದೆ.

ಇದು ಭಾರತದ ಸಾವಿರಾರು ವೃತ್ತಿಪರರಿಗೆ ಮತ್ತು ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿರುವ ಮಂದಿಗೆ ಅನುಕೂಲ ಕಲ್ಪಿಸಲಿದೆ. ಈವರೆಗೆ ಅಮೆರಿಕದಲ್ಲಿ ಕುಟುಂಬ ಸಂಪರ್ಕ ಹೊಂದಿರುವ ಮಂದಿಗೆ ಶೇ. 66ರಷ್ಟು ಗ್ರೀನ್ ಕಾರ್ಡ್‍ಗಳನ್ನು ನೀಡಲಾಗಿದೆ.

ಶೇಕಡ 12ರಷ್ಟು ಜನರಿಗೆ ಮಾತ್ರ ಕೌಶಲ್ಯಗಳ ಆಧಾರದ ಮೇಲೆ ಶಾಶ್ವತ ಪೌರತ್ವಕ್ಕೆ ಅನುವು ಮಾಡಿಕೊಡಲಾಗಿದೆ. ಈಗ ಟ್ರಂಪ್ ಆಡಳಿತ ಹಳೆ ವಿಧಾನವನ್ನು ಬದಲಿಸಲು ಉದ್ದೇಶಿಸಿದೆ. ಶ್ವೇತಭವನದ ರೋಸ್ ಗಾರ್ಡನ್‍ನಲ್ಲಿ ಅಮೆರಿಕ ರಾಷ್ಟ್ರಾಧ್ಯಕ್ಷರು ಈ ಹೊಸ ಪದ್ದತಿಯನ್ನು ಘೋಷಿಸಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin