ಫಲಿತಾಂಶದವರೆಗೂ ಎಲ್ಲರ ಮಾತು ನಿರರ್ಥಕ -ಜಿ.ಟಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 13-ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವವರೆಗೂ ಯಾರೇ ಎಷ್ಟೇ ಮಾತುಗಳನ್ನಾಡಿದರೂ ಅದು ನಿರರ್ಥಕ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಹೇಳಿಕೆಯಲ್ಲಿ ನನ್ನ ಬಗ್ಗೆ ಪ್ರಸ್ತಾಪ ಮಾಡಿರುವುದು ಆಶ್ಚರ್ಯ ತಂದಿದೆ. ಅವರ ಬಗ್ಗೆ ನಾನು ಎಂದೂ ಅಗೌರವವಾಗಿ ಮಾತನಾಡಿಲ್ಲ. ಏಕವಚನವನ್ನೂ ಬಳಸಿಲ್ಲ. ಆದರೂ ನನ್ನ ಹೆಸರನ್ನು ಏಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹಾಗಿದ್ದ ಮೇಲೂ ಕಾಂಗ್ರೆಸ್‍ನ ಶಾಸಕರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುತ್ತಿರುವುದೇಕೆ? ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಯಾರು ಎಷ್ಟೇ ಹೇಳಿಕೆ ನೀಡಿದರೂ ಅದು ವೇಸ್ಟ್ ಎಂದು ಹೇಳಿದರು.

ಕುಮಾರಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಕೆಲವರು ಟೀಕೆ ಮಾಡುತ್ತಾರೆ. ದೇವಸ್ಥಾನಕ್ಕೆ ಯಾರು ಹೋಗಿಲ್ಲ, ಸಿಎಂ ಆಗಿದ್ದಾಗ ಎಲ್ಲರೂ ಹೋಗುತ್ತಾರೆ, ಯಡಿಯೂರಪ್ಪ ಅವರು ಕೂಡ ಹೋಗಿಲ್ಲವೇ? ಮನಸ್ಸಿಗೆ ಬಂದಾಗ ದೇವಸ್ಥಾನಕ್ಕೆ ಹೋಗಬಹುದು, ಬಿಡಬಹುದು ಅದು ಟೀಕಿಸುವ ವಿಷಯವಲ್ಲ. ಬರ ಪರಿಸ್ಥಿತಿ ಬಗ್ಗೆ ಟೀಕೆ ಮಾಡುವುದಾದರೆ ಮಾಡಿ, ಅದು ಬಿಟ್ಟು ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಬೇಡಿ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ