ಬಿಜೆಪಿ ಜೊತೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ : ಜಿ.ಟಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12- ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸುವ ಪ್ರಶ್ನೇಯೇ ಇಲ್ಲ. ಆ ರೀತಿಯ ಯಾವ ಮಾತುಕತೆಗಳೂ ನಡೆದಿಲ್ಲ ಎಂದು ಉನ್ನ ತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಾ.ರಾ.ಮಹೇಶ್ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ಬಗ್ಗೆ ನಮಗೆ ಗೊತ್ತಿಲ್ಲ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗಾಗಲಿ ಈ ವಿಷಯದ ಬಗ್ಗೆ ಗೊತ್ತಿಲ್ಲ. ಇಂದು ನಡೆಯುವ ಜೆಡಿಎಸ್ ಶಾಸಕರ ಸಭೆಯಲ್ಲಿ ಮಹೇಶ್ ಅವರನ್ನು ಕೇಳುತ್ತೇವೆ. ಯಾವ ಕಾರಣಕ್ಕಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದರು ಎಂಬ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದರು.

ಯಾವುದೇ ಸಂದರ್ಭದಲ್ಲೂ ಬಿಜೆಪಿ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಪುನರು ಚ್ಚರಿಸಿದರು. ಸಮ್ಮಿಶ್ರ ಸರ್ಕಾರದ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಚೆಂಡು ಸ್ಪೀಕರ್ ಅವರ ಅಂಗಳದಲ್ಲಿದೆ. ಸುಪ್ರೀಂಕೋರ್ಟ್ ಯಾವ ರೀತಿ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ.

ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ವಾಗದ ಕಾರಣ ಅವರು ಪಕ್ಷದ ಶಾಸಕರಾಗಿಯೇ ಇದ್ದಾರೆ. ಮಂತ್ರಿಗಳೂ ಕೂಡ ರಾಜೀನಾಮೆ ನೀಡಿದ್ದಾರೆ. ಆದರೆ, ಸಚಿವರಾಗಿ ಕೆಲಸ ಮಾಡುತ್ತಿಲ್ಲವೆ. ರಾಜೀನಾಮೆ ಅಂಗೀಕಾರಗೊಳ್ಳುವವರೆಗೂ ಅವರು ಶಾಸಕರಾಗಿಯೇ ಇರುತ್ತಾರೆ ಎಂದು ಜಿಟಿಡಿ ಹೇಳಿದರು.

ಇತ್ತೀಚಿನ ಬೆಳವಣಿಗೆಯಲ್ಲಿ ತಮಿಳುನಾಡು ಮಾದರಿಯ ರಾಜಕಾರಣ ಕರ್ನಾಟಕದಲ್ಲಿ ನಡೆಯುತ್ತಿರುವುದು ವಿಪರ್ಯಾಸ. ಈ ಮೊದಲು ಕರ್ನಾಟಕದ ರಾಜಕಾರಣ ದೇಶಕ್ಕೆ ಮಾದರಿಯಾಗಿತ್ತು. ಮಹತ್ಮಾಗಾಂಧೀಜಿಯವರು, ಜವಹರಲಾಲ್ ನೆಹರು ಅವರು ಕರ್ನಾಟಕದ ರಾಜಕಾರಣವನ್ನು ಪ್ರಶಂಸಿಸಿದ್ದರು. ಆದರೆ, ಕೆಲ ಬೆಳವಣಿಗೆಗಳು ರಾಜಕಾರಣದ ಬಗ್ಗೆ ಜಿಗುಪ್ಸೆ ಬರುವಂತೆ ಮಾಡಿದೆ ಎಂದರು.

ಇನ್ನು ಮುಂದಾದರೂ ನಮ್ಮ ಸುಸಂಸ್ಕøತ ರಾಜಕಾರಣ ಮುಂದುವರೆಯಲಿ ಎಂದು ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುವುದಾಗಿ ಜಿ.ಟಿ.ದೇವೇಗೌಡ ಹೇಳಿದರು.

Facebook Comments