ಶಾಕಿಂಗ್ ಹೇಳಿಕೆ ನೀಡಿದ ಸಚಿವ ಜಿ.ಟಿ.ದೇವೇಗೌಡ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ. 1- ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೈತ್ರಿಯಿಂದಾಗಿ ಕೆಲವು ಕಡೆ ತೊಂದರೆಯಾಗಿದ್ದು, ಕಾರ್ಯಕರ್ತರಲ್ಲಿ ಒಮ್ಮತ ಮೂಡದೇ ಬಿಜೆಪಿಗೆ ಮತ ಹಾಕಿದ ಪರಿಸ್ಥಿತಿ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಒಗಟ್ಟಾಗಿ ಕೆಲಸ ಮಾಡಬೇಕಿತ್ತು. ಜಿದ್ದಾಜಿದ್ದಿನ ಚುನಾವಣೆ ನಡೆಸಿದೆವು ಎಂದು ಹೇಳುವ ಮೂಲಕ ಮೈತ್ರಿ ಯಿಂದಾಗಿ ಹಿನ್ನೆಡೆಯಾಗಿದೆ ಎಂದು ಜಿಟಿಡಿ ಒಪ್ಪಿಕೊಂಡಂತಾಗಿದೆ.

ಇದೇ ವೇಳೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ವೇಳೆ ರಾಜ್ಯಕ್ಕೆ ಬಂದು ಪ್ರಚಾರ ಮಾಡಿರುವುದು ಯಾವುದೇ ಪರಿಣಾಮ ಬೀರಿಲ್ಲ. ಪ್ರಧಾನಿ ಅವರು ಇಡೀ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕಿದೆ.

ಕೇವಲ ಕರ್ನಾಟಕ ಒಂದೇ ನೋಡಲಾಗುವುದಿಲ್ಲ.ರಾಜ್ಯಕ್ಕೆ ಬಂದು ಅವರ ಮಾಡಿ ಪ್ರಚಾರದಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದರು.

Facebook Comments

Sri Raghav

Admin